ಮಣೂರು ಕಂಬಳ ಸಂಪನ್ನ

0
607

ಕುಂದಾಪುರ ಮಿರರ್ ಸುದ್ದಿ…
ಕೋಟ:
ಐತಿಹಾಸಿಕ ಹಿನ್ನಲ್ಲೆಯುಳ್ಳ ಕೋಟದ ಮಣೂರು ಕಂಬಳ ಮಹೋತ್ಸವ ಭಾನುವಾರ ಮಣೂರು ಕಂಬಳಗದ್ದೆಯಲ್ಲಿ ಸಂಪನ್ನಗೊಂಡಿತು.

Click Here

Click Here


ಸಾಂಪ್ರದಾಯಿಕ ಹಿನ್ನಲೆ ಹೊಂದಿದ ಮಣೂರು ಕಂಬಳ ನೋಡಲು ಸಾವಿರಾರು ಜನ ಸೇರಿದ್ದು ವಿಶೇಷವಾಗಿತ್ತು.
ಕೋವಿಡ್ ನಂತರದ ದಿನಗಳಲ್ಲಿ ಕಂಬಳಕ್ಕೆ ಕರಿಛಾಯೆ ನಡುವೆ ಕಂಬಳ ಮಹೋತ್ಸವ ನಡೆದರೂ ಜನಾಕರ್ಷಣೆಗೊಳ್ಳದೆ ಹಾಗೇ ಸಂಪ್ರದಾಯಕ್ಕೆ ಸಿಮೀತಗೊಳ್ಳುತ್ತಿದ್ದವು. ಇದೀಗ ಮತ್ತೆ ಪುನಃ ರಂಗೇರಿದ್ದು ಸಾಕಷ್ಟು ಕಂಬಳದ ಕೋಣಗಳು ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ಕಂಬಳ ಆಯೋಜಿಸಿದ ಹಿನ್ನೆಲೆಯಲ್ಲಿ ಅಪರಾಹ್ನ 3ಗ ಸನಿಹದಲ್ಲೆ ಮುಗಿಸಿ ಬೇರೆಡೆ ತೆರಳಿದವು ಇದರಿಂದ ಮಣೂರು ಕಂಬಳದಲ್ಲಿ ಕೋಣಗಳ ಕೊರತೆ ಕಂಡುಬಂತು.

ಹಂದೆ ಮನೆತನದ ಕೋಣಗಳಿಗಾಗಿ ಕಾದರು!
ಮಣೂರು ಕಂಬಳದಲ್ಲಿ ಒಂದು ವಿಶೇಷತೆಗಳಿವೆ ಅದರಲ್ಲಿ ಹಲವಾರು ಮನೆತನದ ಕಂಬಳದ ಕೋಣಗಳು ಭಾಗಿಯಾಗುತ್ತವೆ ಅದರಲ್ಲಿ ಮುಖ್ಯವಾಗಿ ಹಂದೆ ಮನೆತನದ ಕೋಣಗಳು ಕಂಬಳದ ಗದ್ದೆಗೆ ಇಳಿಯುವುದಕ್ಕಾಗಿ ಸಾವಿರಾರು ಜನ ಕಾದು ಕುಳಿತುಕೊಳ್ಳುತ್ತಾರೆ. ಸಂಜೆ ಸುಮಾರು 5ಗ .ಹಂದೆ ಮನೆತನದ ಕೋಣಗಳು ಕಂಬಳದ ಗದ್ದೆಯಲ್ಲಿಒಡಿಸಿಕೊಂಡು ಬರುತ್ತಿದ್ದಂತೆ ಇತ್ತ ಜನ ಕಾಲ್ಕಿಳಲು ಪ್ರಾರಂಭ ಮಾಡುತ್ತಾರೆ.ಒಟ್ಟಾರೆ ಡೋಲು ವಾದನದ ನಡುವೆ ಮಣೂರು ಕಂಬಳ ವಿಶೇಷವಾಗಿ ಹಬ್ಬದ ವಾತಾವರಣ ರೀತಿಯಲ್ಲಿ ಸಂಭ್ರಮಿಸಿಕೊಳ್ಳುತ್ತದೆ.

Click Here

LEAVE A REPLY

Please enter your comment!
Please enter your name here