ಕುಂದಾಪುರ :ಧರ್ಮ ರಕ್ಷಣೆಗೆ ಹಿಂದೂಗಳು ಶಸ್ತ್ರ ಹಿಡಿಯಲು ಸಿದ್ಧ – ವಿಹಿಂಪ ಮುಖಂಡ ಸುಬ್ರಹ್ಮಣ್ಯ ಹೊಳ್ಳ

0
46

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ನಾಗಮಂಗಲದ ಗಲಾಭೆಯನ್ನು ಸಣ್ಣ ಘಟನೆ ಎಂದು ಸರ್ಕಾರ ಬಿಂಬಿಸಲು ಹೊರಟಿದೆ. ಗೃಹ ಸಚಿವರು ಇದೊಂದು ಸಣ್ಣ ಘಟನೆ ಎನ್ನುವುದಾಗಿ ಪ್ರತಿಕ್ರಿಯೆ ನೀಡುತ್ತಾರೆ. ಮಾಧ್ಯಮಗಳನ್ನು ಹತ್ತಿಕ್ಕುವ ಪ್ರಯತ್ನವಾಗುತ್ತಿದೆ. ಹಿಂದುಗಳು ನಿರ್ವಿರ್ಯರಲ್ಲ, ಅವಶ್ಯಕತೆ ಬಂದಾಗ ಶಸ್ತ್ರಸಜ್ಜಿತವಾಗಿ ಧರ್ಮ ರಕ್ಷಿಸಿಕೊಳ್ಳಲು ಸಿದ್ಧ ಎಂದು ವಿಶ್ವ ಹಿಂದು ಪರಿಷತ್ ಪ್ರಮುಖರಾದ ಸುಬ್ರಹ್ಮಣ್ಯ ಹೊಳ್ಳ ಹೇಳಿದರು.

Click Here

ಕುಂದಾಪುರ ಶಾಸ್ತ್ರೀವೃತ್ತದಲ್ಲಿ ಸೆ.12ರಂದು ಸಂಜೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬದರಿಕೊಪ್ಪಲಿನಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕೋಮು ಗಲಾಭೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕುಂದಾಪುರ ಪ್ರಖಂಡದ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಹಿಂದೂಗಳ ಧಾರ್ಮಿಕ ವಿಚಾರಗಳು ಬಂದಾಗ ಅವರಿಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಇವತ್ತು ಭಾರತ ಉಳಿದರೆ ಮಾತ್ರ ಹಿಂದುಸ್ತಾನ ಉಳಿಯುತ್ತದೆ. ಜಗತ್ತಿನ ಕಲ್ಯಾಣಕ್ಕಾಗಿ ಭಾರತ ಉಳಿಯಲೇಬೇಕು ಎಂದರು. ಇವತ್ತು ಅಪಘಾನಿಸ್ತಾನ ತಾಲಿಬಾನ್ ಆಗಿದೆ, ಪಾಕಿಸ್ತಾನ ಅತಂತ್ರವಾಗಿದೆ. ಅದೇ ರೀತಿಯಲ್ಲಿ ಹಿಂದುಸ್ತಾನವನ್ನು ಒಡೆಯುವ ಹುನ್ನಾರವೂ ನಡೆಯುತ್ತಿದೆ. ನಾಗಮಂಗಲ ಘಟನೆ ಜಿಹಾದಿ ಮಾನಸಿಕತೆಯನ್ನು ಸೂಚಿಸುತ್ತದೆ. ಎಂದರು.
ವಿಹಿಂಪ ಜಿಲ್ಲಾ ಸಹಕಾರ್ಯದರ್ಶಿ ಸುರೇಂದ್ರ ಕೋಟೇಶ್ವರ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ ಇವತ್ತು ಹಿಂದುಗಳು ಧಾರ್ಮಿಕ ಆಚರಣೆ, ಮೆರವಣಿಗೆ ಮಾಡಲು ಅವಕಾಶವಿಲ್ಲವೆ? ಗಣಪತಿ ಮೆರವಣಿಗೆ ಅವರ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ. ಅಂದು ಮಸೀದಿ ಕಟ್ಟಲು ಸ್ಥಳವಕಾಶ ನೀಡಿದ್ದು ಅಂದಿನ ಹಿಂದು ರಾಜರಪರಂಪರೆ. ಆದರೆ ಇವತ್ತು ಹಿಂದುಗಳ ಮೇಲೆ ದೌರ್ಜನ್ಯ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ಒಂದೆಡೆ ದೇಶವನ್ನು ಒಡೆಯುವ ಕೆಲಸ ನಡೆಯುತ್ತಿದ್ದರೆ ಇನ್ನೊಂದೆಡೆ ಭಯೋತ್ಪಾದನೆ ಮೂಲಕ ಹಿಂದೂಗಳ ಕೊಲೆಯಾಗುತ್ತಿದೆ. ಹಿಂದುಗಳು ಎಲ್ಲಿಯ ತನಕ ತಾಳ್ಮೆಯಿಂದ ಇರಬೇಕು? ಎಂದು ಪ್ರಶ್ನಿಸಿದರು.
ವಿಹಿಂಪ ತಾಲೂಕು ಅಧ್ಯಕ್ಷ ಸುಧೀರ್ ಮೆರ್ಡಿ, ಕಾರ್ಯದರ್ಶಿ ಪ್ರದೀಪ ಮಾರ್ಕೋಡು, ಬಿ.ಎಂ.ಎಸ್ ಜಿಲ್ಲಾಧ್ಯಕ್ಷ ಗಿರೀಶ್ ಕುಂದಾಪುರ, ಶಂಕರ ಅಂಕದಕಟ್ಟೆ, ಶ್ರೀನಾಥ, ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಸುರೇಶ ಶೆಟ್ಟಿ ಗೋಪಾಡಿ, ಪ್ರಧಾನ ಕಾರ್ಯದರ್ಶಿ ಸುದೀರ್ ಕೆ.ಎಸ್, ಪ್ರಕ್ಷದ ಪ್ರಮುಖರಾದ ಮೋಹನದಾಸ ಶೆಣೈ, ಸಂತೋಷ್ ಶೆಟ್ಟಿ, ಪ್ರಭಾಕರ, ಶೇಖರ ಪೂಜಾರಿ, ಪ್ರಕಾಶ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here