ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಮ್ಮ ದೇಶದಲ್ಲಿ ಪ್ರತೀ ವರ್ಷ 15 ಲಕ್ಷ ಜನ ಕ್ಯಾನ್ಸ್ ಪೀಡತರಾಗುತ್ತಿದ್ದು, ಆ ಪೈಕಿ 10 ಲಕ್ಷ ಜನ ಸಾವಿಗೀಡಾಗುತ್ತಿದ್ದಾರೆ. ಕ್ಯಾನ್ಸರ್ ಕಾಯಿಯಿಲೆಯ ಬಗ್ಗೆ ಪ್ರತಿಯೊಬ್ಬರೂ ಅರಿವು ಮೂಡಿಸಿಕೊಂಡಾಗ ಕ್ಯಾನ್ಸರ್ ವಿರುದ್ಧ ಹೋರಾಡುವುದು ಸಾಧ್ಯ ಎಂದು ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ರೊ. ಡಾ. ಉಮೇಶ್ ಪುತ್ರನ್ ಹೇಳಿದರು.
ಅವರು ಶನಿವಾರ ತಲ್ಲೂರು ಚರ್ಚಿನ ಸಭಾಂಗಣದಲ್ಲಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, ಇನ್ನರ್ವೀಲ್ ಕ್ಲಬ್ ಕುಂದಾಪುರ ದಕ್ಷಿಣ, ರೋಟರಿ ಸಮುದಾಯ ದಳ ತಲ್ಲೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ, ಕಥೋಲಿಕ್ ಸಭಾ ತಲ್ಲೂರು ಘಟಕ ಹಾಗೂ ಹೆಲ್ತ್ ಕಮಿಷನ್ ತಲ್ಲೂರು ಚರ್ಚ್ ಅವರ ಆಶ್ರಯದಲ್ಲಿ ಜುಲೇಖಾ ಯೆನೆಪೋಯ ಇನ್ಸಿಟ್ಯೂಟ್ ಆಫ್ ಒಂಕೋಲಜಿ ಆಸ್ಪತ್ರೆಯ ನುರಿತ ಅನುಭವಿ ವೈದ್ಯರಿಂದ ನಡೆದ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷೆ ರೊ. ಜುಡಿತ್ ಮೆಂಡೊನ್ಸಾ ಅವರು ಪ್ರಾಸ್ತಾವಿಕ ಮಾತನಾಡಿ, ನಮ್ಮೂರಿನಲ್ಲಿ ಕ್ಯಾನ್ಸರ್ ಬಗ್ಗೆ ಮಾಹಿತಿ ಮತ್ತು ತಪಾಸಣೆ ಶಿಬಿರದ ಮೂಲಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ ಈ ಶಿಬಿರ ಆಯೋಜಿಸಲಾಗಿದೆ. ಜನ ಇಂತಹಾ ಶಿಬಿರಗಳಿಗೆ ಭಾಗವಹಿಸಿ ಅದರ ಪ್ರಯೋಜನ ಪಡೆದುಕೊಂಡಾಗ ಸಂಘಟಕರ ಶ್ರಮ ಸಾರ್ಥಕವಾಗುತ್ತದೆ ಎಂದರು.
ಕ್ಯಾನ್ಸರ್ ಅವೇರ್ ನೆಸ್ ನ ಜಿಲ್ಲಾ ಉಪಾಧ್ಯಕ್ಷ ರೊ. ಡಾ. ಉತ್ತಮ್ ಕುಮಾರ್ ಶೆಟ್ಟಿ, ತಲ್ಲೂರು ಗ್ರಾ.ಪಂ.ಅಧ್ಯಕ್ಷ ಗಿರೀಶ್ ಎಸ್. ನಾಯಕ್, ತಲ್ಲೂರು ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಕೆಲ್ವಿನ್ ಮೆಂಡೊನ್ಸಾ, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತಾ ಆಚಾರ್, ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಸಿಸ್ಟೆಂಟ್ ಗವರ್ನರ್ ಆರ್. ಬಿ.ರಾಜೇಂದ್ರ ಶೆಟ್ಟಿ, ಜುಲೇಖಾ ಯೆನೆಪೋಯ ಇನ್ಸಿಟ್ಯೂಟ್ ಆಫ್ ಒಂಕೋಲಜಿ ಆಸ್ಪತ್ರೆಯ ವೈದ್ಯಾಧಿಕಾರಿ ಉಪಸ್ಥಿತರಿದ್ದರು. ಸುರೇಖಾ ಪುರಾಣಿಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.