ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ, ಇವರ ಸಹಭಾಗಿತ್ವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸ್ಕುತ್ತೂರಿನಲ್ಲಿ ನಡೆದ ಹುಣ್ಸೆಮಕ್ಕಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳಲ್ಲಿ ಒಟ್ಟು 27 ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಮ್ಮ ಪ್ರತಿಭೆಯನ್ನ ತೋರ್ಪಡಿಸಿದ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ 11 ಪ್ರಥಮ, 09 ದ್ವಿತೀಯ, ಹಾಗೂ 7 ತೃತೀಯ ಬಹುಮಾನಗಳನ್ನ ಪಡೆದಿರುತ್ತಾರೆ.ಪ್ರಥಮ ಸ್ಥಾನಗಳಿಸಿರುವ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ತಮ್ಮಅರ್ಹತೆಯನ್ನು ಗಳಿಸಿಕೊಂಡಿರುತ್ತಾರೆ.
ಸಾಮೂಹಿಕ ವಿಭಾಗದ ಕವಾಲಿ ಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಾದ ಋತು ಆರ್ ಎಸ್, ನಿಧಿ ಜೆ. ಶೆಟ್ಟಿ, ಸಾನ್ವಿ ಶೆಟ್ಟಿ, ಮಹಮದ್ ಶಿಝಾನ್, ಭೂಮಿಕಾ, ನಿತ್ಯಶ್ರೀ ಇವರುಗಳು ಪ್ರಥಮ ಸ್ಥಾನವನ್ನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವೈಯಕ್ತಿಕ ವಿಭಾಗದಲ್ಲಿ, ಪ್ರತೀಕ್ ಜಿ.ಎಂ (ಚರ್ಚಾ ಸ್ಪರ್ಧೆ), ಋತು ಆರ್ ಎಸ್ (ಗಝಲ್), ಸಂಜಿತ್ (ಮಿಮಿಕ್ರಿ), ಶ್ರೇಯಾ (ಜಾನಪದ ಗೀತೆ),ಪ್ರಾವ್ಯ ( ಇಂಗ್ಲೀಷ್ ಭಾಷಣ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಪ್ರಾಥಮಿಕ ವಿಭಾಗದಲ್ಲಿ, ಮೊಹಮ್ಮದ್ ಶಹೀಫ್ (ಅರೇಬಿಕ್ ಧಾರ್ಮಿಕ ಪಠಣ), ರಿಹಾನಿ (ಪದ್ಮವೇಷ), ಆರಾಧ್ಯ.ಆರ್( ಚಿತ್ರಕಲೆ), ಚಾನ್ಸಿ (ಅಭಿನಯ ಗೀತೆ ), ವರ್ಮಿತ ( ಸಂಸ್ಕೃತ ಧಾರ್ಮಿಕ ಪಠಣ) ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಹೈಸ್ಕೂಲ್ ವಿಭಾಗದ ವೈಯಕ್ತಿಕ ಸ್ಪರ್ಧೆಗಳಲ್ಲಿ ಅಕ್ಷರ (ಭರತನಾಟ್ಯ), ಅಂಕಿತ (ಸಂಸ್ಕೃತ ಭಾಷಣ), ಅಭೀಕ್ಷ(ಕನ್ನಡ ಭಾಷಣ), ಪ್ರಗತಿ (ಪ್ರಬಂಧ), ಸಾಯಿನಿಧಿ (ಹಿಂದಿ ಭಾಷಣ) ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಪ್ರಾಥಮಿಕ ವಿಭಾಗದ ವೈಯಕ್ತಿಕ ಸ್ಪರ್ಧೆಗಳಲ್ಲಿ ಆದ್ವಿಕ್ ಆರ್. (ಕಥೆ ಹೇಳುವುದು) ಮೊಹಮ್ಮದ್ ರಾಹೀಷ್(ಅರೆಬಿಕ್ ಧಾರ್ಮಿಕ ಪಠಣ) ,ಆರಾಧ್ಯ (ಚಿತ್ರಕಲೆ) ಪ್ರಥಮ (ಕ್ಲೇ ಮಾಡ್ಲಿಂಗ್) ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಸಾಮೂಹಿಕ ವಿಭಾಗ ದ ಜಾನಪದ ನೃತ್ಯದಲ್ಲಿ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಾದ ಸುಖಿ, ಸಾತ್ವಿ.ಕೆ, ಸಿರಿ, ಶ್ರಾವ್ಯಶ್ರೀ, ಶ್ರಾವಣಿ, ವಿಜಯ ಪೈ. ತ್ರತೀಯ ಸ್ಥಾನಗಳಿರುತ್ತಾರೆ. ವೈಯಕ್ತಿಕ ಸ್ಪರ್ಧೆಗಳಲ್ಲಿ ನವ್ಯಶ್ರೀ ( ಭಾವಗೀತೆ), ಸಂಜಿತ ನಿಧಿ ( ಆಶುಭಾಷಣ), ಶ್ರೇಯಸ್, ಮನ್ವಿತ್ ( ರಸಪ್ರಶ್ನೆ) ಸ್ಪರ್ಧೆಗಳಲ್ಲಿ ತ್ರತೀಯ ಸ್ಥಾನ ಪಡೆದಿರುತ್ತಾರೆ.
ಪ್ರಾಥಮಿಕ ವಿಭಾಗದಲ್ಲಿ ವಿನಾಯಕ್ (ಆಶುಭಾಷಣ), ಆಲಿಯ ಹಲೀಮಾ ಖಾನ್ (ದೇಶಭಕ್ತಿ ಗೀತೆ), ಆತ್ಮ ಯ್(ಆಶುಭಾಷಣ) ಸ್ಪರ್ಧೆಗಳಲ್ಲಿ ತ್ರತೀಯ ಸ್ಥಾನ ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರಶಂಶಿಸಿರುತ್ತಾರೆ.