ಕುಂದಾಪುರ ಮಿರರ್ ಸುದ್ದಿ…
ಕೋಟ: ಫ್ರೆಂಡ್ಸ್ ಗುಂಡ್ಮಿ ಸಾಸ್ತಾನ ಇದರ ಆಶ್ರಯದಲ್ಲಿ ಮೂರನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಗುಂಡ್ಮಿ ಪರಿಸರದಲ್ಲಿ ಇತ್ತೀಚಿಗೆ ನಡೆಯಿತು.
ಕಾರ್ಯಕ್ರಮವನ್ನು ಗುಂಡ್ಮಿ ಪಾತಾಳಬೆಟ್ಟು ಖಾಸಗಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ನಾಗೇಶ್ ಮಯ್ಯ ಉದ್ಘಾಟಿಸಿ ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಗುಂಡ್ಮಿ ಇದರ ಅಧ್ಯಕ್ಷ ಜಗನಾಥ್ ಪೂಜಾರಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಪಾತಾಳ್ ಬೆಟ್ಟು ಗುಂಡ್ಮಿ ಇಲ್ಲಿನ ನಿವೃತ್ತ ಶಿಕ್ಷಕಿ ಅಹಲ್ಯ ಇವರನ್ನು ಸನ್ಮಾನಿಸಲಾಯಿತು. ಕೋವಿಡ್ ಸಂದರ್ಭದಲ್ಲಿ ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸಿದ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತರಿಗೆ ವಿಶೇಷವಾಗಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸ್ಥಳೀಯವಾಗಿ ಏರ್ಪಡಿಸಿದ್ದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ,ಸದಸ್ಯ ರವೀಂದ್ರ ಕಾಮತ್,ವಕೀಲ ಮೊಹಮ್ಮದ್ ಸುಹಾನ್ ಗುಂಡ್ಮಿ,ಫ್ರೆಂಡ್ಸ್ ಗೌರವಾಧ್ಯಕ್ಷ ನಾರಾಯಣ ಸೆಟ್ಟಿಗಾರ್ ,ಫ್ರೆಂಡ್ಸ್‍ನ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಫ್ರೆಂಡ್ಸ್ ಸದಸ್ಯೆ ಸೌಮ್ಯ ಶ್ರೀಧರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಫ್ರೆಂಡ್ಸ್ ಸದಸ್ಯ ಪ್ರವೀಣ್ ಸೆಟ್ಟಿಗಾರ್ ನಿರೂಪಿಸಿದರು. ಸದಸ್ಯ ವಿನಯ್ ಗುಂಡ್ಮಿ ವಂದನಾರ್ಪಣೆಗೈದರು.ಸನ್ಮಾನಪತ್ರವನ್ನು ಫ್ರೆಂಡ್ಸ್ ಸದಸ್ಯ ಮಂಜುನಾಥ ಪೂಜಾರಿ ವಾಚಿಸಿದರು.