ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಲಯನ್ಸ್ ಜಿಲ್ಲಾ 317 ಸಿ, ರಿಜನ್ V ರ ವಲಯ II ರ ಲಯನ್ಸ್ ಕ್ಲಬ್ ಗಳಾದ ಹಂಗಳೂರು, ಕೋಟೇಶ್ವರ, ಕುಂದಾಪುರ ಕೋಸ್ಟಲ್ ಮತ್ತು ಕುಂದಾಪುರ ಅಮೃತಧಾರ ಇವುಗಳ ಸಲಹಾ ಸಮಿತಿ ಸಭೆ ವಲಯಾಧ್ಯಕ್ಷ ಲಯನ್ ಹೆಚ್ ಬಾಲಕೃಷ್ಣ ಶೆಟ್ಟಿ ನೇತೃತ್ವದಲ್ಲಿ PCP ಆಡಿಟೋರಿಯಂನಲ್ಲಿ ಪ್ರಥಮ ಝೋನ್ ಸೋಶಿಯಲ್ ಜರಗಿತು.
ನಾಲ್ಕು ಕ್ಲಬ್ ಗಳ ಕಾರ್ಯದರ್ಶಿಗಳು ಸೇವಾ ಚಟುವಟಿಕೆಗಳನ್ನು ಮಂಡಿಸಿದರು.
ವಲಯಾಧ್ಯಕ್ಷ ಲಯನ್ ಬಾಲಕೃಷ್ಣ ಶೆಟ್ಟಿಯವರು ನಾಲ್ಕು ಕ್ಲಬ್ಬುಗಳ ಸೇವೆಗಳನ್ನು ಪ್ರಶಂಸಿಸಿದರು. ಸೇವಾ ಚಟುವಟಿಕೆ ಅಂಗವಾಗಿ ಹಂಗಳೂರು ಕ್ಲಬ್ ನಿಂದ ಸರಕಾರಿ ಪ್ರೌಢ ಶಾಲೆ ಬಸ್ರೂರು ಇಲ್ಲಿನ 60 ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರವನ್ನು ಒದಗಿಸಲು ಧನ ಸಹಾಯ ನೀಡಲಾಯಿತು.
ಜಡ್ಕಲ್ ನಿವಾಸಿ ಜಾಸ್ಮಿನ್ ಜೋಸೆಫ್ ಎಂಬ ಮಹಿಳೆಗೆ ಚಿಕಿತ್ಸೆ ಧನ ಸಹಾಯ ನೀಡಲಾಯಿತು.
ಲಯನ್ ರೋವನ್ ಡಿ’ ಕೊಸ್ತ ಅವರ ಅಧ್ಯಕ್ಷತೆಯಲ್ಲಿ ನಡೆದ ವಲಯ ಸಮಾವೇಶದಲ್ಲಿ ಇತರ ಕ್ಲಬ್ ಗಳ ಅಧ್ಯಕ್ಷರುಗಳಾದ ಲಯನ್ ಬಿ.ಎಸ್. ವಿಶ್ವನಾಥ್, ಲಯನ್ ಉದಯಕುಮಾರ್ ಶೆಟ್ಟಿ ಲಯನ್ ಡಾ. ವಾಣಿಶ್ರೀ ಐತಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಲಯ ಕಾರ್ಯದರ್ಶಿ ಲಯನ್ ವಿಲ್ಫ್ರೆಡ್ ಮೇನೇಝಸ್ ಶುಭಾಶಂಸನೆ ಗೈದರು. ಲಯನ್ ಮ್ಯಾಥ್ಯೂ ಜೋಸೆಫ್ ಉಪಸ್ಥಿತರಿದ್ದರು. ಲಯನ್ ಪುನೀತ್ ಶೆಟ್ಟಿ ವಂದನಾರ್ಪಣೆ ಮಾಡಿದರು. ಲಯನ್ ರಜನಿ ಮ್ಯಾಥ್ಯೂ ಕಾರ್ಯಕ್ರಮ ನಿರೂಪಣೆ ಮಾಡಿದರು.