ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಇಲ್ಲಿನ ಕೋಟದ ಮೂಡುಗಿಳಿಯಾರಿನಲ್ಲಿರುವ ಎಸ್‍ಎಚ್‍ಆರ್‍ಎಫ್ ಯೋಗಬನ ನ್ಯಾಷನಲ್ ಹೆಲ್ತ್ ಅವಾರ್ಡ ಪಡೆದುಕೊಂಡಿದೆ
ಸೆ. 21 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿನಲ್ಲಿರುವ ರಾಯಲ್ ಸೆನೆಟ್‍ನಲ್ಲಿ ಆಯೋಜಿಸಿದ ವಿಶೇಷ ಸಮಾರಂಭದಲ್ಲಿ ಆಯುಷ್ ಟಿವಿ ವತಿಯಿಂದ ಯೋಗಬನಕ್ಕೆ ನ್ಯಾಷನಲ್ ಹೆಲ್ತ್ ಅವಾರ್ಡನ್ನು (ಆಯುಷ್ ಟಿವಿ ನ್ಯಾಷನಲ್ ಹೆಲ್ತ್ ಅವಾರ್ಡ -2024 )ನೀಡಿ ಗೌರವಿಸಲಾಯಿತು.
ಪ್ರಶಸ್ತಿಯನ್ನು ಚಲನ ಚಿತ್ರ ನಟಿ ಪ್ರಿಯಾಂಕಾ ಉಪೇಂದ್ರರವರು ಯೋಗಬನದ ಸಿಇಓ ಡಾ. ವಿವೇಕ ಉಡುಪ (ಯೋಗಿಜೀ ) ಹಾಗೂ ಸಿಎಮ್‍ಓ ಡಾ.ಮಾನಸ ಉಡುಪರಿಗೆ ನೀಡಿ ಗೌರವಿಸಿದರು.
ಆಯುಷ್ ಟಿವಿಯ ಛೇರ್ಮನ್ ಪದ್ಮಶ್ರೀ ಡಾ. ವಿ. ಆರ್. ಗೌರಿಶಂಕರ್ ಮತ್ತು ವೈಸ್ ಛೇರ್ಮನ್ ಡಾ. ಆರ್. ಅರುಣಾಚಲಂ ಇದ್ದರು.