ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರದ ಕೊಂಬೆಯೊಂದು ಬಿದ್ದ ಪರಿಣಾಮ ಸ್ಕೂಟರ್ ಸವಾರ ಗಂಗೊಳ್ಳಿ ನಿವಾಸಿ, ಮಸೀದಿ ಧರ್ಮಗುರು, ಜನಾಬ್ ಮೌಲಾನ ಮೊಹಮ್ಮದ್ ಮತೀನ್ ಸಾಹಬ್ ಸಿದ್ದಿಕಿ(51) ಗಾಯಗೊಂಡ ಘಟನೆ ತ್ರಾಸಿ ಹೋಲೀ ಕ್ರಾಸ್ ಸಮೀಪ ರಸ್ತೆಯಲ್ಲಿ ನಡೆದಿದೆ.
ಇವರು ಗಂಗೊಳ್ಳಿಯಿಂದ ತ್ರಾಸಿ ಕಡೆಗೆ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಹೋಗುತ್ತಿದ್ದರು. ಈ ಸಂದರ್ಭ ತ್ರಾಸಿ ಹೋಲೀ ಕ್ರಾಸ್ ಸಮೀಪ ರಸ್ತೆ ಪಕ್ಕದಲ್ಲಿದ್ದ ಮರದ ಕೊಂಬೆ ಇವರು ಸಂಚರಿಸುತ್ತಿದ್ದ ಸ್ಕೂಟರ್ ಮೇಲೆ ಬಿದ್ದಿದೆ. ಘಟನೆಯಿಂದ ಅವರ ತಲೆ ಹಾಗೂ ಕುತ್ತಿಗೆಗೆ ಒಳ ಗಾಯಗಳಾಗಿದ್ದು, ಕುಂದಾಪುರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.