ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಕೋಟದ ಹಾಡಿಕೆರೆ ಬೆಟ್ಟು ಪರಿಸರದ ನಿತೀಶ್ ಉಪಾಧ್ಯಾಯ 29(ವ) ಬುಧವಾರ ಹೃದಯಾಘಾತದಿಂದ ನಿಧನರಾದರು.
ಪೂರ್ವಾಹ್ನ ಬಾತ್ ರೂಮ್‍ಗೆ ತೆರಳಿದ ಸಂದರ್ಭದಲ್ಲಿ ಪೋನ್ ಕಾಲ್‍ನಲ್ಲಿದ್ದ ನಿತೀಶ್ ಮಾತು ನಿಲ್ಲಿಸಿದದ್ದನ್ನು ಕೇಳಿಸಿಕೊಂಡ ತಾಯಿ ಪಕ್ಕದ ಶನೀಶ್ವರ ದೇಗುಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಮಾಹಿತಿ ನೀಡಿದ್ದು ಬಾತ್ ರೂಮ್ ಬಾಗಿಲು ಒಡೆದು ಒಳಗೆ ಪ್ರವೇಶಿಸಿ ಕೂಡಲೇ ಆಸ್ಪತ್ರೆಗೆ ರವಾನಿಸುವಷ್ಟರಲ್ಲಿ ಉಸಿರು ಚೆಲ್ಲಿದ್ದಾರೆ.
ಪ್ರಸ್ತುತ ಕುಂದಾಪುರದಲ್ಲಿ ಇನ್ಸ್ಯುರೇನ್ಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ತಾಯಿಗೆ ಓರ್ವ ಪುತ್ರನಾಗಿದ್ದಾರೆ.ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.