ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ನೆಲ್ಲಿಕಟ್ಟೆಯ ಜೈ ಭಾರತಿ ಶಾಲೆಯಲ್ಲಿ ನೆಲ್ಲಿಕಟ್ಟೆಯ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ವತಿಯಿಂದ ರಜತ ಸಂಭ್ರಮದ ಶಾರದೋತ್ಸವವು ಅ. 9 ರಿಂದ ಅ. 13 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ರಜತ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಹೇಳಿದರು.
ಅವರು ನೆಲ್ಲಿಕಟ್ಟೆಯ ಜೈ ಭಾರತಿ ಶಾಲೆಯ ವಠಾರದಲ್ಲಿ ರಜತ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಜೈ ಭಾರತಿ ಶಾಲೆಯಲ್ಲಿ 2000 ರಲ್ಲಿ ಮೊದಲ ಬಾರಿಗೆ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಿ, ಪೂಜಿಸಲಾಗುತ್ತಿದ್ದು, ನೆಲ್ಲಿಕಟ್ಟೆ ದಸರಾ ಎಂದೇ ಕರೆಯಲಾಗುತ್ತಿದೆ. 2009 ರಲ್ಲಿ ದಶಮಾನೋತ್ಸವ ಆಚರಣೆ ನೆರವೇರಿದ್ದು, ಆಗ ಶಾರದಾ ಮಂದಿರವನ್ನು ನಿರ್ಮಿಸಲಾಯಿತು. ಈ ಬಾರಿ ರಜತ ಸಂಭ್ರಮ ನಡೆಯುತ್ತಿದೆ.
ಪ್ರಸಿದ್ಧ ಕ್ಷೇತ್ರಗಳಲ್ಲಿ ಇರುವಂತೆ ದಾನಿಗಳ ಸಹಕಾರದಿಂದ ಯಾಗ ಶಾಲೆ ನಿರ್ಮಾಣ ಮಾಡಲಾಯಿತು. ಪ್ರತಿ ವರ್ಷ ದಸರಾ ಸಂಭ್ರಮದಲ್ಲಿ ದೇವಿಯ ಸನ್ನಿಧಿಯಲ್ಲಿ ದುರ್ಗಾಹೋಮ, ದೀಪಾ ನಮಸ್ಕಾರ, ರಂಗೊಪೂಜೆ, ತುಲಾಭಾರ ಸೇವೆ, ಅಕ್ಷರಾಭ್ಯಾಸ ಮುಂತಾದ ಸೇವೆಗಳು ನಡೆಯುತ್ತದೆ ಎಂದರು. ಭಕ್ತಾಭಿಮಾನಿಗಳಿಂದ ಆನೇಕ ಪೂಜಾ ಸಲಕರಣೆಗಳು ಅಲ್ಲದೆ ಬೆಳ್ಳಿ, ಚಿನ್ನದ ಆಭರಣಗಳು ಹರಕೆ ರೂಪದಲ್ಲಿ ಬಂದಿರುತ್ತದೆ. ಇಲ್ಲಿನ ವಿಶೇಷ ಅಂದರೆ ಶ್ರೀ ಶಾರದೋತ್ಸವ ಆಚರಣೆ ಸಂದರ್ಭದಲ್ಲಿ ಪ್ರತಿ ನಿತ್ಯ ಅನ್ನದಾನ ಸೇವೆ ನಡೆಯುತ್ತಿರುವುದು ಈ ಸ್ಥಳದ ಮಹಿಮೆ ಎಂದರು.
ಅ.9 ರಂದು ಕೋದಂಡ ರಾಮಚಂದ್ರ ದೇವಸ್ಥಾನದಿಂದ ಮೆರವಣಿಗೆಯಿಂದ ದೇವಿಯ ವಿಗ್ರಹ ತಂದು ಶಾರದ ಮಂಟಪದಲ್ಲಿ ಪ್ರತಿಷ್ಠಾಪನೆ ನಡೆಯಲಿದ್ದು, ಬೆಳಗ್ಗೆ ದುರ್ಗಾಹೋಮ, ಮಧ್ಯಾಹ್ನಾ ಅನ್ನಸಂತರ್ಪಣೆ, ಸಂಜೆ ದೀಪಾ ನಮಸ್ಕಾರ ಮತ್ತು ರಜತ ಸಂಭ್ರಮದ ಉದ್ಘಾಟನೆ ನಡೆಯಲ್ಲಿದ್ದು ಸುಪ್ರಭಾತ ಗ್ರೂಫ್ ಆಫ್ ಹೋಟೆಲ್ ನ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಾರದೋತ್ಸವ ಸಮಿತಿಯ ಅಧ್ಯಕ್ಷ ಕೆ.ಶಂಕರ ಶೇಟ್ ವಹಿಸಲಿದ್ದಾರೆ.
ಅ.10ರಂದು ಬೆಳಿಗ್ಗೆ ಲಲಿತಾ ಸಹಸ್ರ ನಾಮ, ದುರ್ಗಾಹೋಮ, ಅನ್ನಸಂತರ್ಪಣೆ, ಸಂಜೆ ರಂಗಪೂಜೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದ್ದು ಧಾರ್ಮಿಕ ಸಂದೇಶವನ್ನು ಕಟೀಲು ವಿಶ್ರಾಂತ ಪ್ರಾಂಶುಪಾಲರು ಎಂ.ಬಾಲಕೃಷ್ಣ ನೀಡಲಿದ್ದಾರೆ. ಪ್ರತಿಭಾ ಪುರಸ್ಕಾರವನ್ನು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ವಿತರಿಸಿಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಜತ ಸಮಿತಿಯ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ವಹಿಸಿಲಿದ್ದಾರೆ.
ಅ.11ರಂದು ಬೆಳಿಗ್ಗೆ ಚಂಡಿಕಾಹೋಮ, ಅನ್ನಸಂತರ್ಪಣೆ, ಸಂಜೆ ರಂಗಪೂಜೆ ಮತ್ತು ಶಾರದೋತ್ಸವ ಸಮಿತಿಯ ಅಧ್ಯಕ್ಷ ಕೆ.ಶಂಕರ ಶೇಟ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಅ.12ರಂದು ಬೆಳಿಗ್ಗೆ ದುರ್ಗಾಹೋಮ, ಅನ್ನಸಂತರ್ಪಣೆ, ಸಂಜೆ ರಂಗಪೂಜೆ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಜತ ಸಮಿತಿಯ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ವಹಿಸಿಲಿದ್ದಾರೆ.
ಅ.13ರಂದು ಅನ್ನಸಂತರ್ಪಣೆ ನಡೆಯಲಿದ್ದು, ಮಧ್ಯಾಹ್ನ 2.30ಕ್ಕೆ ವಿಸರ್ಜನಾ ಶೋಭಾಯಾತ್ರೆ ನಡೆಯಲಿದೆ.
ಈ ಸಂದರ್ಭದಲ್ಲಿ ರಜತ ಸಂಭ್ರಮ ಸಮಿತಿಯ ಹಾಗೂ ಶಾರದೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.