ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮಾನವೀಯತೆಯೇ ಇಲ್ಲದ ಅಧಿಕಾರಸ್ತರನ್ನು ಪೂಜಿಸುವ ಸಾಮಾಜಿಕ ವ್ಯವಸ್ಥೆಯಿಂದಾಗಿ ದೇಶದಲ್ಲಿ ಭ್ರಷ್ಟಾಚಾರ ನಿರಂತರವಾಗಿದೆ. ತೃಪ್ತಿ ಇಲ್ಲದ ಸಮಾಜ ದಾಹಕ್ಕೊಳಗಾಗಿದೆ. ಯುವ ಮನಸ್ಸುಗಳು ವಾಸ್ತವವನ್ನು ಅರ್ಥ ಮಾಡಿಕೊಂಡು ಮುಂದುವರೆದರೆ ಮಾತ್ರ ದೇಶ ಆರ್ಥಿಕ ದಿವಾಳಿಯಾಗುವುದನ್ನು ತಪ್ಪಿಸಬಹುದು ಎಂದು ನಿವೃತ್ತ ಲೋಕಾಯುಕ್ತ ನ್ಯಾ| ಸಂತೋಷ ಕುಮಾರ್ ಹೆಗ್ಡೆ ಹೇಳಿದರು.
ಅವರು ರವಿವಾರ ಶಾಸ್ತ್ರಿ ಸರ್ಕಲ್ ಬಳಿ ಜೆ.ಕೆ. ಟವರ್ಸ್ ನಲ್ಲಿ ಬಂಟರ ಕ್ರೆಡಿಟ್ ಸಹಕಾರಿ ಸಂಘವನ್ನು ಉದ್ಘಾಟಿಸಿ, ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕೇಸರ ಬನ್ನೂರು ಅಪ್ಪಣ್ಣಹೆಗ್ಡೆ ಬಂಟರ ಗಂಡು ಮೆಟ್ಟಿನ ನಾಡು ಕುಂದಾಪುರದಲ್ಲಿ ಈವರೆಗೆ ಬಂಟರ ಸಹಕಾರಿ ಸಂಸ್ಥೆ ಇರಲಿಲ್ಲ. ಇಲ್ಲಿ ಆರಂಭವಾದ ಸಂಘ ಉತ್ಕೃಷ್ಟತೆಗೆ ಹೋಗಲಿ ಎಂದರು.
ಭದ್ರತಾ ಕೊಠಡಿ, ಗಣಕಯಂತ್ರ, ಅಧ್ಯಕ್ಷರ ಕೊಠಡಿ ಉದ್ಘಾಟನೆಯನ್ನು ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ ರೈ ಮಾಲಾಡಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ನೆರವೇರಿಸಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಆವರ್ಸೆ ವಹಿಸಿ, ಸಂಘದ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ದ.ಕ ಜಿಲ್ಲಾ ಕೇಂದ್ರಸಹಕಾರಿ ಬ್ಯಾಂಕ್ ನಿರ್ದೇಶಕ ಎಂ. ಮಹೇಶ್ ಹೆಗ್ಡೆ ಗಿಳಿಯಾರು ಕುಶಲ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ. ಉದಯಕುಮಾರ್ ಹೆಗ್ಡೆ, ಯುವ ಬಂಟರ ಸಂಘದ ಅಧ್ಯಕ್ಷನಿತೀಶ್ ಶೆಟ್ಟಿ ಬಸೂರು, ಸಿಇಒ ಈ ಸಂಪತ್ ಕುಮಾರ್ ಶೆಟ್ಟಿ ಆರ್ಡಿ, ನಿರ್ದೇಶಕರಾದ ಸಂಜೀವ್ ಶೆಟ್ಟಿ ಸಂಪಿಗೇಡಿ, ಸಂಪತ್ ಕುಮಾರ್ ಶೆಟ್ಟಿ ಈ ಕಾವ್ರಾಡಿ, ಅಶೋಕ್ ಕುಮಾರ್ ಶೆಟ್ಟಿ ಸಂಸಾಡಿ, ಕೆ. ರಮೇಶ್ ಶೆಟ್ಟಿ ಗುಲ್ವಾಡಿ, ಕಿರಣ್ ಹೆಗ್ಡೆ ಅಂಪಾರು, ಸುಪ್ರೀತಾ ಕೈ ದೀಪಕ್ ಕುಮಾರ್ ಶೆಟ್ಟಿ ಆನಂದ್ ಶೆಟ್ಟಿ ಆವರ್ಸೆ, ಪ್ರಕಾಶ್ ಚಂದ್ರ ಶೆಟ್ಟಿ ಈ ಚಿತ್ತೂರು, ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು, ಉದಯ ಕುಮಾರ್ ಶೆಟ್ಟಿ ಮಚ್ಚಟ್ಟು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಸೀತಾರಾಮ ಶೆಟ್ಟಿ ಕೆದೂರು ಸ್ವಾಗತಿಸಿ, ನಿರ್ದೇಶಕ ವಿಕಾಸ್ ಹೆಗ್ಡೆ ಕೊಳ್ಳರೆ ಪ್ರಸ್ತಾವಿಸಿ, ಉಪನ್ಯಾಸಕ ಅಕ್ಷಯ ಹೆಗ್ಡೆ ಮೊಳಹಳ್ಳಿ ನಿರ್ವಹಿಸಿದರು.