ಅಂಪಾರು :ವಿದ್ಯೆಯಿಂದ ಸುಖ ಸಂಪತ್ತು ಲಭ್ಯ- ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

0
246

ನೆಲ್ಲಿಕಟ್ಟೆಯ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ವತಿಯಿಂದ ರಜತ ಸಂಭ್ರಮದ ಶಾರದೋತ್ಸವ – ಚಂಡಿಕಾಹೋಮ ಸಂಪನ್ನ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕ್ಷಣಕ್ಷಣದ ಕಣವನ್ನೂ ವ್ಯರ್ಥ ಮಾಡದೇ ಆಸಕ್ತಿ, ಶ್ರದ್ದೆಯಿಂದ ವಿದ್ಯೆಯನ್ನು ಸಂಪಾದಿಸಿಕೊಂಡರೆ ಸುಖ ಸಂಪತ್ತುಗಳೆಲ್ಲವೂ ವಿದ್ಯೆಯಿಂದಲೇ ಲಭಿಸುತ್ತದೆ. ವಿದ್ಯೆಗೆ ಶಾರದಾ ದೇವಿಯ ಅನುಗ್ರಹವೂ ಅಗತ್ಯ. ತಾಯಿಯ ಅನುಗ್ರಹವಿದ್ದರೆ ಹುಟ್ಟು ಮೂಗನೂ ಉತ್ತಮ ವಾಗ್ಮಿಯಾಗಬಲ್ಲ, ಹುಟ್ಟು ಅಜ್ಞಾನಿಯೂ ಉತ್ತಮ ಜ್ಞಾನಿಯಾಗಬಲ್ಲ. ಹಾಗಾಗಿ ದೇವಿಯ ಆರಾಧನೆ, ಶ್ರದ್ದೆಯಿಂದ ವಿದ್ಯೆಯ ಸಂಪಾದನೆ ಜೀವನದ ಲಕ್ಷ್ಯ ಆಗಬೇಕು ಎಂದು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠ, ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

Click Here

ನೆಲ್ಲಿಕಟ್ಟೆಯ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ವತಿಯಿಂದ ರಜತ ಸಂಭ್ರಮದ ಶಾರದೋತ್ಸವದ ಅಂಗವಾಗಿ ನಡೆದ ಚಂಡಿಕಾ ಹೋಮ ಪೂರ್ಣಾಹುತಿಯಲ್ಲಿ ಭಾಗಿಯಾಗಿ ಆಶೀರ್ವಚನ ನೀಡಿದರು.

ವಿದ್ಯೆಯಿಂದ ಎಲ್ಲ ಬಂಧಗಳಿಂದ ವಿಮುಖರಾಗಲು ಸಾಧ್ಯ. ಹಾಗಾಗಿ ವಿದ್ಯೆಯನ್ನೇ ಶ್ರೇಷ್ಟ ಸಂಪತ್ತನ್ನಾಗಿ ಭಾವಿಸಬೇಕು. ಜೊತೆಯಲ್ಲಿ ನಾವು ಧರ್ಮದ ಪಥದಲ್ಲಿ ನಡೆಯಬೇಕು. ಜೀವನದುದ್ದಕ್ಕೂ ಧರ್ಮದ ನಡೆಇರಬೇಕು. ನಯ, ವಿನಯ ಬದುಕಿನಲ್ಲಿ ಶ್ರೇಷ್ಟವಾದುದು. ನಿರಂತರವಾದ ಪ್ರಯತ್ನ ಯಶಸ್ಸಿಗೆ ಕಾರಣವಾಗುತ್ತದೆ ಎಂದರು.

ಸಾರ್ವಜನಿಕವಾಗಿ ಕಳೆದ 25 ವರ್ಷಗಳಿಂದ ಆಚರಿಸಲ್ಪಡುತ್ತಿರುವ ಶಾರದಾ ಮಾತೆಯ ಆರಾಧನೆ ಇಲ್ಲಿ ನಡೆಯುತ್ತಿದೆ. ಇದು ನಿರಂತರತೆಗೆ ತಾಯಿಯ ಆಶಿರ್ವಾದವೂ ಕಾರಣ. ವಿಶೇಷವಾಗಿ ಶಾರದೆಯ ಅನುಗ್ರಹ ಎಲ್ಲರಿಗೂ ಲಭ್ಯವಾಗುತ್ತದೆ. ಈ ಆಚರಣೆ ಮುಂದೆ ಸುವರ್ಣಮಹೋತ್ಸವ, ವಜ್ರಮಹೋತ್ಸವ, ಶತಮಾನೋತ್ಸವಗಳನ್ನು ಕಾಣಲಿ ಎಂದು ಶ್ರೀಗಳು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಚಂಡಿಕಾ ಹೋಮದ ಸೇವಾಕರ್ತರಾದ ಶ್ರೀಮತಿ ಉಜ್ವಲ ಮತು ಪ್ರದೀಪ್ ಕುಮಾರ್ ಶೆಟ್ಟಿ, ಅನ್ವಿ ಶೆಟ್ಟಿ ಮತ್ತು ಮನೆಯವರು ಗುಡಿಬೆಟ್ಟು ಉಪಸ್ಥಿತರಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶಂಕರ್ ಶೇಟ್, ಕಾರ್ಯದರ್ಶಿ ಸುಬ್ರಹ್ಮಣ್ಯ ನೆಲ್ಲಿಕಟ್ಟೆ, ರಜತ ಸಂಭ್ರಮದ ಕಾರ್ಯದರ್ಶಿ ನವೀನ್ ಕುಮಾರ್ ಶೆಟ್ಟಿ ಶಾನ್ಕಟ್ಟ್ ಪದಾಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here