ಕುಂದಾಪುರ: ಪ್ರತಿಷ್ಟಿತ ನಾರಾಯಣ ಗುರು ಯುವಕ ಮಂಡಲದ 47ನೇ ವರ್ಷದ ನವರಾತ್ರಿ ಉತ್ಸವ ಸಂಪನ್ನ

0
252

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: ನಾರಾಯಣಗುರು ಯುವಕ ಮಂಡಲದ ವತಿಯಿಂದ 47ನೇ ವರ್ಷದ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಒಂಭತ್ತು ದಿನಗಳ ಕಾಲ ನಡೆದ ನವರಾತ್ರಿ ಉತ್ಸವದ ಕೊನೆಯ ದಿನವಾದ ಶನಿವಾರ ರಾತ್ರಿ ಕುಂದಾಪುರದ ಮುಖ್ಯ ರಸ್ತೆಯಲ್ಲಿ ಅದ್ಧೂರಿಯಾದ ಶ್ರೀದೇವಿಯ ಶೋಭಾಯಾತ್ರೆ ಮೆರವಣಿಗೆ ನಡೆಯಿತು. ನಾರಾಯಣ ಗುರುಗಳ ಸಂದೇಶ ಸಾರವಾದ ಒಂದೇ ಜಾತಿ, ಒಂದೇ ಮತ ಒಂದೇ ದೇವರು ಎನ್ನುವ ಘೋಷ ವಾಕ್ಯದೊಂದಿಗೆ ದೇವಿಯ ಪ್ರತಿಮೆಯನ್ನು ಸುಸಜ್ಜಿತವಾದ ನಂದಿಯ ವಾಹನದ ಮೇಲೆ ಕುಳ್ಳಿರಿಸಿ ಪ್ರದಕ್ಷಿಣೆ ಹಾಕಲಾಯಿತು.

ಈ ಸಂದರ್ಭ ತಟ್ಟಿರಾಯ, ಕೀಲು ಕುದುರೆ, ಎಒಳ್ಳು ಕುಣಿತ, ಭಜನೆ ಕುಣಿತ ಮೊದಲಾದ ಸ್ಥಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿ ಬಂದವು. ವಿವಿಧ ವೈವಿದ್ಯಮಯ ಸಿಡಿಮದ್ದುಗಳು ನೋಡುಗರನ್ನು ಆಕರ್ಷಿಸಿದವು.

LEAVE A REPLY

Please enter your comment!
Please enter your name here