ಸಿದ್ದಾಪುರ: ವಿಧಾನಪರಿಷತ್ ಉಪ ಚುನಾವಣೆಯ ಬಿಜೆಪಿ ಪ್ರಚಾರ ಸಭೆ

0
166

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಗ್ರಾಮೀಣ ವಿಕಾಸಕ್ಕಾಗಿ ವಿಧಾನಪರಿಷತ್ ಚುನಾವಣೆಯಾಗಿದೆ. ಇದಕ್ಕೆ ಶಕ್ತಿ ತುಂಬುವ ಕೆಲಸಕ್ಕಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಸಮಾನ್ಯ ಕಾರ್ಯಕರ್ತರನ್ನು ಸ್ಥಳೀಯಮಟ್ಟದಿಂದ ದಿಲ್ಲಿಯ ಮಟ್ಟದವರೆಗೆ ಬೆಳೆಸುವ ಪಕ್ಷ ಇದ್ರೆ ಅದು ಬಿಜೆಪಿ ಪಕ್ಷ ಮಾತ್ರ. ಸಾಮಾನ್ಯ ಕಾರ್ಯಕರ್ತನನ್ನು ಪರಿಷತ್‌ಗೆ ಕಳಿಸುವ ಕೆಲಸವನ್ನು ಸ್ಥಳೀಯಾಡಳಿತ ಸದಸ್ಯರು ಒಗ್ಗಟ್ಟಿನ ಮೂಲಕ ಮಾಡಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಅವರು ಸಿದ್ದಾಪುರ ಶ್ರೀರಂಗನಾಥ ಸಭಾ ಭವನದಲ್ಲಿ ಸೋಮವಾರ ವಿಧಾನಪರಿಷತ್ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯ ಪರವಾಗಿ ಸಿದ್ದಾಪುರ ಬಿಜೆಪಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಸ್ಥಳೀಯಾಡಳಿತ ಸದಸ್ಯರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ. ಪ್ರಕೃತಿಯ ಜತೆಯಲ್ಲಿ ಜನ ಜೀವನ ಉಳಿಯಬೇಕು. ಪ್ರಕೃತಿ ಉಳಿದರೆ ಮನುಷ್ಯ ಕೂಡ ಬದುಕುತ್ತಾನೆ. ಕಸ್ತೂರಿರಂಗನ್ ವರದಿಯಲ್ಲಿ ಜನ ವಸತಿ ಪ್ರದೇಶವನ್ನು ಬಿಟ್ಟು, ಅರಣ್ಯ ಪ್ರದೇಶವನ್ನು ವರದಿಗೆ ಸೇರಿಸಲು ಅಭ್ಯಂತರ ಇಲ್ಲ ಎಂದರು.

Click Here

Click Here

ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತಯಾಚನೆ ಮಾಡಿ ಮಾತನಾಡಿ, ಗ್ರಾ.ಪಂ. ಸದಸ್ಯರಿಗೆ ಗೌರವ ಧನವನ್ನು ಹೆಚ್ಚಿಸಿದಿದ್ದರೆ ಅದು ಬಿಜೆಪಿ ಸರಕಾರ. ಪ್ರಜಾಪ್ರಭುತ್ವದ ದೇಗುಲವಾದ ವಿಧಾನ ಸೌಧವನ್ನು ಅಪವಿತ್ರಗೊಳಿಸಿದ ಪಕ್ಷ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷ ಗೆದ್ದರೆ, ಭಯೋತ್ಪಾದಕರಿಗೆ ಹಾಗೂ ಕಟುಕರಿಗೆ ಬಲ ಬಂತಾಗುತ್ತದೆ ಎಂದರು.

ಬಿಜೆಪಿ ಅಭ್ಯರ್ಥಿ ಕಿಶೋರ್‌ಕುಮಾರ್ ಪುತ್ತೂರು ಅವರು ಮತಯಾಚನೆ ಮಾಡಿದರು.

ಅಭ್ಯರ್ಥಿಯ ಪರವಾಗಿ ಶಾಸಕರಾದ ಗುರುರಾಜ ಗಂಟಿಹೊಳೆ, ಕಿರಣ್‌ಕುಮಾರ ಕೊಡ್ಗಿ ಅವರು ಮತಯಾಚನೆ ಮಾಡಿದರು.

ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಚುನಾವಣಾ ಉಸ್ತುವಾರಿ ಅರುಣ್, ಹಿಂದುಳಿದ ವರ್ಗದ ವಿಠಲ ಪೂಜಾರಿ, ಯುವಮೊರ್ಚದ ಜಿಲ್ಲಾಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು ಮಂಡಲದ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಉಮೇಶ ಶೆಟ್ಟಿ ಕಲ್ಗದ್ದೆ ಕಾರ್ಯಕ್ರಮ ನಿರೂಪಿಸಿದರು. ಸಿದ್ದಾಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರವೀಣ್‌ಕುಮಾರ ಶೆಟ್ಟಿ ವಂದಿಸಿದರು.

Click Here

LEAVE A REPLY

Please enter your comment!
Please enter your name here