ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ನಮ್ಮೂರಿನ ಸಮೃದ್ಧತೆ ಜಗತ್ತಿಗೆ ತೋರಿಸಬೇಕಾದರೆ ಬೈಂದೂರು ಉತ್ಸವದಂತಹ ಸಾಂಘಿಕ ಶ್ರಮದ ಅಗತ್ಯವಿದೆ ಎಂದು ಉದ್ಯಮಿ ರಾಮಕೃಷ್ಣ ಶೇರುಗಾರ್ ಹೇಳಿದರು.
ಗುರುವಾರ ಸಂಜೆ ಸಮೃದ್ದ ಜನಸೇವಾ ಟ್ರಸ್ಟ್ ಬೈಂದೂರು ಸಹಭಾಗಿತ್ವದಲ್ಲಿ ಬೈಂದೂರು ಉತ್ಸವ -2024 ಅಂಗವಾಗಿ ಯಡ್ತರೆ ಜೆ.ಎನ್.ಆರ್ ಕಲಾಮಂದಿರದಲ್ಲಿ ನಡೆದ ಕ್ರೀಡಾ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ದಾನಿಗಳ ನೆರವಿನಿಂದ ಸಮೃದ್ಧ ಜನಸೇಎವಾ ಚಾರಿಟೇಬಲ್ ಟ್ರಸ್ಟ್ ಮೂಲಕ ಹಲವು ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದಾರೆ. ಇದೀಗ ಬೈಂದೂರು ಉತ್ಸವದ ಮೂಲಕ ಅವರು ಕಂಡ ಕನಸನ್ನು ನಾವೆಲ್ಲರೂ ಸಂಘಟಿತರಾಗಿ ನನಸು ಮಾಡಿಕೊಳ್ಳಬೇಕಿದೆ ಎಂದರು.
ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಜಿ.ಗೋಕುಲ ಶೆಟ್ಟಿ, ಕೊಲ್ಲೂರುಮೂಕಾಂಬಿಕಾ ದೇವಸ್ಥಾನದ ಮಾಜೀ ಟ್ರಸ್ಟೀ ಜಯಾನಂದ ಹೋಬಳಿದಾರ್, ಗೌರಿ ದೇವಾಡಿಗ, ತಂಗಪ್ಪನ್, ಮಂಜುನಾಥ ಪೂಜಾರಿ ಸಸಿಹಿತ್ಲು, ಶ್ರೀ ಗಣೇಶ ಉಪ್ಪುಂದ, ಅನಿತಾ ಅರ್.ಕೆ ಉಪಸ್ಥಿತರಿದ್ದರು.
ಸಮೃದ್ದ ಬೈಂದೂರು ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಉಪ್ಪುಂದ ಪ್ರಾಸ್ತಾವಿಸಿದರು. ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿದರು. ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಸಸಿಹಿತ್ಲು ವಂದಿಸಿದರು.