ಕುಂದಾಪುರ ಮಿರರ್ ಸುದ್ದಿ..
ಕೋಟ: ಶ್ರೀ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು ಕೋಟ ಇದರ ಹಿಂದಿನ ಆಡಳಿತದಾರರಾದ ಕೆ.ಮಾಧವ ಕಾರಂತ ವಯೋ ಸಹಜ ಕಾಯಿಲೆಯಿಂದ ಭಾನುವಾರ ನಿಧನರಾದರು. ಡಾ.ಕೋಟ ಶಿವರಾಮ ಕಾರಂತರ ಸಹೋದರ ಪುತ್ರರಾಗಿರುವ ಇವರು ಪ್ರಸ್ತುತ ಉಡುಪಿಯಲ್ಲಿ ನೆಲೆಸಿರುವ ಸುಮಾರು 94ವ ಪ್ರಾಯದ ಕಾರಂತರು ಸುಮಾರು 30 ವ ಕಾರಂತ ಕುಟುಂಬದ ಕೋಟ ಗಿಳಿಯಾರಿನ ಶ್ರೀ ಶಾಂಭವೀ ಶಾಲೆಯ ಆಡಳಿತದಾರರಾಗಿ ಸೇವೆ ಸಲ್ಲಿಸಿದ್ದರು. ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮಾರ್ಗದರ್ಶಕರಾಗಿದ್ದರು. ಕುಂದಾಪುರದ ಪ್ರತಿಷ್ಠಿತ ಭಂಡಾರ್ಕರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಪತ್ನಿ ಮತ್ತು ಮೂವರು ಪುತ್ರಿ, ಹಾಗೂ ಅಪಾರ ಸಂಖ್ಯೆಯ ಬಂಧುಗಳು, ಹಿತೈಷಿಗಳನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರ ಕೋಟದ ಕಾರಂತರ ಮನೆಯ ವಠಾರದಲ್ಲಿ ಜರಗಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಂತಾಪ ಸೂಚಿಸಿದ್ದಾರೆ.