ಕುಂದಾಪುರ :ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಕಾನೂನು ಅರಿವು ಅಗತ್ಯ – ಜಯಪ್ರಕಾಶ್ ಹೆಗ್ಡೆ

0
188

ವಿದ್ಯಾರಣ್ಯ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಕುಂದಾಪುರ :ಮಕ್ಕಳ ಸುಂದರವಾದ ಭವಿಷ್ಯ ಶಾಲೆಯಲ್ಲಿ ಅಡಗಿದೆ. ಮಕ್ಕಳು ಒಳ್ಳೆಯ ಹವ್ಯಾಸವನ್ನು ಎಳೆವೆಯಲ್ಲಿಯೇ ರೂಢಿಸಿಕೊಂಡರೆ ಉತ್ತಮ ಪ್ರಜೆಯಾಗಲು ಸಾಧ್ಯವಾಗುತ್ತದೆ. ಮಕ್ಕಳು ಶಾಲಾ ದಿನಗಳಲ್ಲಿ ವ್ಯಸನಿಗಳಾಗದೆ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮೊಬೈಲ್ ಬಳಕೆಯ ಕುರಿತು ಮಕ್ಕಳು ಜಾಗ್ರತೆಯಿಂದಿರಬೇಕು. ಮಕ್ಕಳು ಇಂದಿನ ರಾಜಕೀಯ ವಿದ್ಯಮಾನಗಳನ್ನು ಅರ್ಥ ಮಾಡಿಕೊಂಡು ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡುವುದು ಅತ್ಯಗತ್ಯವಾಗಿದೆ. ಯುವ ಪೀಳಿಗೆ ಉತ್ತಮ ರಾಜಕೀಯ ಜ್ಞಾನ ಹೆಚ್ಚಿಸಿಕೊಂಡರೆ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಾಗುತ್ತದೆ”ಎಂದು ಉಡುಪಿ-ಚಿಕ್ಕಮಗಳೂರು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

Click Here

Click Here

ಇವರು ಯಡಾಡಿ- ಮತ್ಯಾಡಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ “ಕಾನೂನು ಅರಿವು” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ ಮಾತನಾಡುತ್ತ “ಇಂದಿನ ಯುವ ಜನಾಂಗ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ಉತ್ತಮ ಆಡಳಿತ ನಿರೀಕ್ಷಿಸಬಹುದು. ಮಕ್ಕಳು ಶಾಲಾ ಹಂತದಲ್ಲಿಯೇ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ಉತ್ತಮ ಜವಾಬ್ದಾರಿಯುತ ನಾಗರೀಕರಾಗಲು ಸಾಧ್ಯ. ಜಯಪ್ರಕಾಶ್ ಹೆಗ್ಡೆ ಅಂತಹ ಉತ್ತಮ ಸಭ್ಯ ವ್ಯಕ್ತಿಯ ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಎಂ ಬದುಕು ಯುವ ಪೀಳಿಗೆಗೆ ಆದರ್ಶ ಪ್ರಾಯವಾದುದು” ಎಂದರು. ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿ ಅವರು ಕಾರ್ಯಕ್ರಮದ ಕುರಿತಾದ ಪ್ರಾಸ್ತಾವಿಕ ಮಾತುಗಳ ಜೊತೆಗೆ ಸ್ವಾಗತಿಸಿದರು. ವಿದ್ಯಾರ್ಥಿಗಳು ಇಂದಿನ ರಾಜಕೀಯ ವ್ಯವಸ್ಥೆ ಮತ್ತು ರಾಜಕಾರಣದ ಸಮಸ್ಯೆಗಳ ಕುರಿತು ಜಯಪ್ರಕಾಶ್ ಹೆಗ್ಡೆ ಯವರೊಂದಿಗೆ ಚರ್ಚಿಸಿ ಹಲವು ಪ್ರಶ್ನೆಗಳಿಗೆ ಉತ್ತರ ಪಡೆದದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಸುಜ್ಞಾನ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕ ಸಂತೋಷ್ ಕುಮಾರ್ ಕೋಟ ಕಾರ್ಯಕ್ರಮ ನಿರ್ವಹಿಸಿದರು.

Click Here

LEAVE A REPLY

Please enter your comment!
Please enter your name here