ಗೋವಿಗಾಗಿ ನಾವು ತಂಡದ ಸದಸ್ಯ ಭರತ್ ಗಾಣಿಗರ ಜನುಮದಿನದ ಅಂಗವಾಗಿ ಮೇವು ಕೊಡುಗೆ

0
146

ಗೋವಿಗಾಗಿ ನಾವು ತಂಡದ ಗೋ ಮಾತೆಯ ಆರಾಧನೆ – ಮೊಳಹಳ್ಳಿ ದಿನೇಶ್ ಹೆಗ್ಡೆ

ಕುಂದಾಪುರ ಮಿರರ್ ಸುದ್ದಿ…
ಕೋಟ: ಗೋವಿನ ಮಹತ್ವ ಅರಿತು ಅವುಗಳಿಗೆ ಮೇವು ಒದಗಿಸುವ ನಾಗೇಂದ್ರ ಪುತ್ರನ್ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ ಹೇಳಿದರು.

ಕೋಟದಲ್ಲಿ ನಾಗೇಂದ್ರ ಪುತ್ರನ್ ನೇತೃತ್ವದಲ್ಲಿ ಗೋವಿಗಾಗಿ ನಾವು ಪ್ರಚಾರಕ್ಕಲ್ಲ ಪ್ರೇರಣೆ ಆರನೇ ಸರಣಿ ಕಾರ್ಯಕ್ರಮದಲ್ಲಿ ಕೋಟದ ಭರತ್ ಗಾಣಿಗ ಹುಟ್ಟು ಹಬ್ಬದ ಅಂಗವಾಗಿ ಸ್ಥಳೀಯ ಗೋಶಾಲೆಗಳಿಗೆ ಮೇವು ಹಸ್ತಾಂತರಿಸುವ ಸಭೆಯಲ್ಲಿ ಮಾತನಾಡಿ ಗೋ ಆರಾಧನೆ ಶ್ರೇಷ್ಠವಾದ ಕಾರ್ಯಕ್ರಮ ಇಂಥಹ ಕೈಂಕರ್ಯಗಳಿ ರಾಜಕೀಯ ರಹಿತವಾಗಿ ಹಮ್ಮಿಕೊಂಡಿರುವುದು ಅತ್ಯಂತ ಪ್ರಶಂಸನೀಯ ಎಂದರು.

Click Here

Click Here

ಇದೇ ವೇಳೆ ಮೇವು ವಾಹನಕ್ಕೆ ಹಾಕುವ ಮೂಲಕ ಮುಖಂಡರಾದ ಮೊಳಹಳ್ಳಿ ದಿನೇಶ್ ಹೆಗ್ಡೆ ಗೋವಿಗಾಗಿ ನಾವು ತಂಡದ ಸದಸ್ಯ ಭರತ್ ಗಾಣಿಗರಿಗೆ ಜನುಮದಿನದ ಶುಭಾಶಗಳನ್ನು ಕೋರಿ ಸಿಹಿ ಹಂಚಿ ಗೌರವಿಸಿದರು.

ಈ ಸಂದರ್ಭದಲ್ಲಿ ಗೋವಿಗಾಗಿ ನಾವು ತಂಡದ ಮುಖ್ಯಸ್ಥ ನಾಗೇಂದ್ರ ಪುತ್ರನ್, ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ ಗಿಳಿಯಾರು, ಪ್ರಗತಿಪರ ಕೃಷಿಕರಾದ ರವೀಂದ್ರ ಐತಾಳ್ ಪಾರಂಪಳ್ಳಿ,ಕಾಂಗ್ರೆಸ್ ಮುಖಂಡರಾದ ಗೋಪಾಲ್ ಬಂಗೇರ, ಗೋವಿಗಾಗಿ ನಾವು ತಂಡದ ವಸಂತ ಸುವರ್ಣ, ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿ ಚಂದ್ರ ಆಚಾರ್ ನಿರೂಪಿಸಿ ವಂದಿಸಿದರು

Click Here

LEAVE A REPLY

Please enter your comment!
Please enter your name here