ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ತಲ್ಲೂರು ನಾರಾಯಣ ವಿಶೇಷ ಮಕ್ಕಳ ಶಾಲೆಗೆ ಅಧ್ಯಕ್ಷ ಲಯನ್ ರೋವನ್ ಡಿ’ಕೋಸ್ತ ಮತ್ತು ಸದಸ್ಯರು ಭೇಟಿ ನೀಡಿ ಎಲ್ಲಾ ಮಕ್ಕಳಿಗೆ ಒಂದು ತಿಂಗಳಿಗೆ ಬೇಕಾಗುವ ಆಹಾರ ಸಾಮಾಗ್ರಿ ನೀಡಿದರು.
ವಿಶೇಷ ಅತಿಥಿಗಳಾಗಿ ದ್ವಿತೀಯ ಉಪ ರಾಜ್ಯಪಾಲ ಲಯನ್ ರಾಜೀವ ಕೋಟ್ಯಾನ್ ಆಗಮಿಸಿದ್ದು ಕ್ಲಬ್ ನ ಸೇವಾಕಾರ್ಯ ಮೆಚ್ಚಿ ಪ್ರಶಂಸಿಸಿದರು.
ವಲಯಾಧ್ಯಕ್ಷ ಲಯನ್ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸೇವೆಗೆ ಅವಕಾಶ ಮಾಡಿಕೊಟ್ಟ ಬಗ್ಗೆ ಟ್ರಸ್ಟಿಗೆ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷ ಲಯನ್ ರೋವನ್ ಡಿ’ಕೋಸ್ತ್ ಟ್ರಸ್ಟ್ ನ ಸೇವಾ ಕಾರ್ಯ ಮೆಚ್ಚಿ ಶಾಲೆಯ ಮುಂದಿನ ಅಭಿವೃದ್ದಿಗೆ ತನ್ನಿಂದಾದ ನೆರವು ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಲಯನ್ ಮ್ಯಾಥ್ಯೂ ಜೋಸೆಫ್, ಲಯನ್ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯ ಟ್ರಸ್ಟೀ ಸುರೇಶ್ ಕ್ಲಬ್ ನ ಸರ್ವ ಸದಸ್ಯರ ಸೇವಾ ಕಾರ್ಯಕ್ಕೆ ವಂದಿಸಿದರು. ಮುಖ್ಯ ಶಿಕ್ಷಕಿ ಸ್ವಾಗತಿಸಿದರು.