ಕುಂದಾಪುರ ಮಿರರ್ ಸುದ್ದಿ…
ಕೋಟ: ಪರಿಸರ ಸ್ವಚ್ಛತೆ ಅಥವಾ ಅದನ್ನು ಕಾಪಾಡುವ ಮನಸ್ಥಿತಿ ಸರ್ವಶ್ರೇಷ್ಠವಾದದ್ದು ಈ ದಿಸೆಯಲ್ಲಿ ಪಂಚವರ್ಣ ಯುವಕ ಮಂಡಲ ಹಾಗೂ ಅದರ ಭಾಗವಾಗಿ ಕಾರ್ಯನಿರ್ವಹಿಸುವ ಸಂಘಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದ್ದಾರೆ.
ಕೋಟ ಪಂಚವರ್ಣ ಯುವಕ ಮಂಡಲದ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ,ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಯಕ್ಷ ಸೌರಭ ಕಲಾರಂಗ ಕೋಟ,ಮಹಿಳಾ ಬಳಗ ಹಂದಟ್ಟು ಇವರುಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಭಾನುವಾರ ಪರಿಸರ ಸ್ನೇಹಿ ಕಾರ್ಯಕ್ರಮಕ್ಕೆ ಶ್ರೀಮಠದಿಂದ ಕೊಡುಗೆಯಾಗಿ ನೀಡಿದ ಟೀ ಶರ್ಟ ಬಿಡುಗಡೆ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಆಶ್ರ್ರೀವಚನ ನೀಡಿ ಈ ದೇಶದ ಪ್ರಧಾನಿ ಸ್ವಚ್ಛತಾ ಕಾರ್ಯಕ್ರಮದ ಆಂದೋಲನ ಹಮ್ಮಿಕೊಂಡ ಮರುಗಳಿಗೆಯಲ್ಲೆ ಆಯಾ ಭಾಗಗಳ ಸಂಘಸಂಸ್ಥೆಗಳು,ಮಠ ಮಂದಿರಗಳು ನಿರಂತರವಾಗಿ ಈಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ.ಅದರಂತೆ ನಿಮ್ಮ ಯುವಕ ಮಂಡಲಗಳ ನಿರಂತ ಈ ಕಾರ್ಯ ದೇವರು ಮೆಚ್ಚುವ ಕಾರ್ಯವಾಗಿದೆ.ಎಲ್ಲರನ್ನು ಒಗ್ಗೂಡಿಸಿಕೊಂಡು ನಿರ್ವಹಿಸವ ಕಾರ್ಯದಲ್ಲಿ ಯಶಸ್ಸು ಕಟ್ಟಿಟ್ಡಬುತ್ತಿ, ಪರಿಸರ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯಲಿ ಆ ಮೂಲಕ ಬಿದಿ ಬದಿಗಳಲ್ಲಿ ಎಸೆಯುವ ಕೈಗಳಿಗೆ ಹೊಸ ದಿಕ್ಕು ತೋರಿಸಿ ಪರಿಶುದ್ಧ ಪರಿಸರಕ್ಕೆ ಮುನ್ನುಡಿ ಬರೆಯುವ ಕೆಲಸ ಎಲ್ಲಾ ಭಾಗಗಳ ಸಂಘಟನೆಯ ಮೇಲಿರಲಿ ಎಂದರು.
ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಮಾತನಾಡಿ ಸ್ವಚ್ಛತೆ ವಿಚಾರದಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಹೆಚ್ಚಿಸುವ ಕೆಲಸ ನಾವುಗಳು ಮಾಡಬೇಕಿದೆ.
ಪರಿಸರ ಆರಾಧಿಸುವ ಮನೋಭಾವನೆ ಬೆಳಸಿಕೊಳ್ಳಬೇಕು ತನ್ಮೂಲಕ ಮುಂದಿನ ಪಿಳಿಗೆಗೆ ಅದರ ಬಗ್ಗೆ ಅರಿವು ಮೂಡಿಸುವ ಕೆಲಸ ಸಂಘಸಂಸ್ಥೆಗಳಿಂದ ಆಗಲಿ ಎಂದು ಹಾರೈಸಿದರು.
ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ,ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಅಧ್ಯಕ್ಷೆ ವನೀತಾ ಉಪಾಧ್ಯ, ಮಹಿಳಾ ಬಳಗ ಹಂದಟ್ಟು ಅಧ್ಯಕ್ಷೆ ಪುಷ್ಭಾ .ಕೆ,ಪಂಚವರ್ಣ ಉಪಾಧ್ಯಕ್ಷ ಮನೋಹರ್ ಪೂಜಾರಿ ,ಸ್ಥಾಪಕ ಸದಸ್ಯ ನರಸಿಂಹ ಗಾಣಿಗ,ಸುಧೀರ್ ಕೊಯ್ಕೂರ್,ವಿಪ್ರ ಮಹಿಳಾ ಬಳಗದ ಜಯಲಕ್ಷ್ಮಿ ರಾವ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ನಿರೂಪಿಸಿ ವಂದಿಸಿದರು.