ಸಂದಿಗ್ಧ ಸಮಯದಲ್ಲಿ ಆಶಾಕಾರ್ಯಕಾರ್ತೆಯರ ಸೇವೆ ಅಮೂಲ್ಯವಾದದು- ಸುಬ್ರಹ್ಮಣ್ಯ ಪೂಜಾರಿ

0
606

ಕುಂದಾಪುರ ಮಿರರ್ ಸುದ್ದಿ…
ಕೋಟ:
ಕರೊನಾದಂತಹ ಸಂದಿಗ್ಧ ಸಮಯದಲ್ಲಿ ತಮ್ಮ ಜೀವನದ ಹಂಗು ತೊರೆದು ನಾಗರಿಕರ ಬಗ್ಗೆ ಆಶಾಕಾರ್ಯಕರ್ತೆಯರು ತೋರಿದ ಕಾಳಜಿ ಅಮೂಲ್ಯವಾದುದು, ಅವರ ಈ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಸರಕಾರ ಅವರ ಜೀವಾನೋಪಾಯಕ್ಕೆ ಭದ್ರತೆ ನೀಡಬೇಕು, ಅಲ್ಲದೇ ಸಮಾಜದ ಒಳಿತಿಗಾಗಿ ಅವರ ತ್ಯಾಗ ಪರಿಶ್ರಮವನ್ನು ಸಮಾಜ ಗುರುತಿಸಬೇಕು ಎಂದು ಸ್ವಾಗತ್ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ ಅವರು ಹೇಳಿದರು.

Click Here

Click Here

ಅವರು ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ ಬಾರ್ಕೂರು ಇದರ ಸಾಬ್ರಕಟ್ಟೆ ಶಾಖೆ ಹಾಗೂ ಯುವವಾಹಿನಿ ಯಡ್ತಾಡಿ ಘಟಕದ ವತಿಯಿಂದ ಕೊರೊನಾ ವಾರಿಯರ್ಸ್ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
17 ಆಶಾಕಾರ್ಯಕರ್ತೆಯರನ್ನು ಹಾಗೂ ಪಿಗ್ಮಿ ಸಂಗ್ರಹಕಾರದ ಕೆ.ಪಿ ಕೋಟಿ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸ್ವಾಗತ್ ವಿವಿಧೊದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರು, ನಿರ್ದೇಶಕರು, ಗೌರವ ಸಲಹೆಗಾರರು, ಸಿಬ್ಬಂದಿಗಳು, ಯುವವಾಹಿನಿಯ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here