ಕುಂದಾಪುರ ಮಿರರ್ ಸುದ್ದಿ…
ಕೋಟ: ಬಾರ್ಕೂರು ಶ್ರೀ ವೇಣುಗೋಪಾಲಕೃಷ್ಣ ದೇಗುಲದಲ್ಲಿ ನ. 27ರಂದು ಜರಗಿದ ವಾರ್ಷಿಕ ಕಾರ್ತಿಕ ದೀಪೋತ್ಸವ ಪ್ರಯುಕ್ತ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ವತಿಯಿಂದ ಸಾಧಕರಿಗೆ ಸಮ್ಮಾನ, ಗ್ರಾ.ಪಂ. ಸದಸ್ಯರಿಗೆ ಗೌರವಾರ್ಪಣೆ ಜರಗಿತು.
ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ವಾಸುದೇವ ಬೈಕಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಸಂಘಟನೆಗೆ ಪ್ರತಿಯೊಬ್ಬರ ಒಗ್ಗೂಡುವಿಕೆ ಅಗತ್ಯ. ನಮ್ಮ ಸಮಾಜ ಎಲ್ಲಾ ಕ್ಷೇತ್ರಗಳಲ್ಲೂ ಬಲಗೊಳ್ಳುತ್ತಿದ್ದು ಮುಂದೆ ಸಂಘಟನೆ, ಸಮಾಜವನ್ನು ಇನ್ನೂ ಹೆಚ್ಚಿಗೆ ಬಲಪಡಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಕೋಡಿ ಕೃಷ್ಣ ಗಾಣಿಗರಿಗೆ ಸುವರ್ಣ ಮಹೋತ್ಸವ ಯಕ್ಷನಿಧಿಯಿಂದ ಕೊಡಮಾಡುವ ದಿ| ಹಾರಾಡಿ ರಾಮ ಗಾಣಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಮಾಜಿ ಅಧ್ಯಕ್ಷರು, ಸಮಾಜ ಹಾಗೂ ದೇಗುಲದ ಅಭಿವೃದ್ಧಿಗೆ ಅವಿರತ ಶ್ರಮಿಸಿದ ಕೆ. ಗೋಪಾಲ್ ಮತ್ತು ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್ ಗಾಣಿಗ ಮಾಲ್ತಾರು-ಬ್ರಹ್ಮಾವರ, ಮಾನವ ಹಕ್ಕುಗಳ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಕೋಟ ಅವರನ್ನು ಸಮ್ಮಾನಿಸಲಾಯಿತು ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಉಪ್ಪುಂದ ಶ್ರೀಧರ ಗಾಣಿಗ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಶೇಖರ್ ಗಾಣಿಗ ಬೀಜನಮಕ್ಕಿ, ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿದ ಯಶೋಧ ರಾಘವೇಂದ್ರ ಗಾಣಿಗ ಸಾೈಬ್ರಕಟ್ಟೆ, ಹಿರಿಯ ಸಮಾಜ ಸೇವಕ ಶ್ರೀನಿವಾಸ ರಾವ್ ಪ್ರಗತಿನಗರ ಅವರನ್ನು ಗೌರವಿಸಲಾಯಿತು.
ಸಮಾಜದಿಂದ ಉಡುಪಿ ಜಿಲ್ಲೆಯ ವಿವಿಧ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾದ ನಾಗವೇಣಿ ಪಂಡರಿನಾಥ ಬಿರ್ತಿ, ರೇಖಾ ತೆಂಕನೆಡಿವೂರು, ನಟರಾಜ್ ಗಾಣಿಗ ಮಾಬುಕಳ, ಗಣೇಶ್ ಗಾಣಿಗ ಬಾರ್ಕೂರು, ದಿವಾಕರ ಗಾಣಿಗ ಆವರ್ಸೆ, ನಾಗರಾಜ ಗಾಣಿಗ ಬಸ್ರೂರು, ರವಿ ಗಾಣಿಗ ಕೆಂಚನೂರು, ಉಷಾ ಗಾಣಿಗ ಶಿರೂರು, ಸುಮಿತ್ರ ಗಾಣಿಗ ಉಪ್ಪುಂದ, ರಾಘವೇಂದ್ರ ಗಾಣಿಗ ಬವಳಾಡಿ, ಜಲಜಾಕ್ಷಿ ಗಾಣಿಗ ಹೆರೆಂಜಾಲು, ಸುಲೋಚನ ಗಾಣಿಗ ನಾವುಂದ, ಲೀಲಾವತಿ ಗಾಣಿಗ ಕನ್ಯಾಣ, ಹರೀಶ್ ಗಾಣಿಗ ಕುಂಭಾಶಿ, ಲೋಲಾಕ್ಷಿ ಗಾಣಿಗ ಗುಜ್ಜಾಡಿ, ಸೀತಾರಾಮ್ ಗಾಣಿಗ ಗುಜ್ಜಾಡಿ, ಮಹಾಲಕ್ಷ್ಮೀ ಗಾಣಿಗ ಉಪ್ಪುಂದ, ಜಯಲಕ್ಷ್ಮೀ ಗಾಣಿಗ ನಾರ್ಕಳಿ, ಸುಮತಿ ಗಾಣಿಗ ಯಡಮೊಗೆ ಅವರನ್ನು ಸಮ್ಮಾನಿಸಲಾಯಿತು. ಹಲವು ವರ್ಷಗಳಿಂದ ದೀಪೋತ್ಸವದ ಅನ್ನಸಂತರ್ಪಣೆ ಸೇವಾದಾರರಾದ ನೀಲಾವರ ಸಂಜೀವ ರಾವ್ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಯಿತು.
ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ ಬಿ.ಎಸ್. ಮಂಜುನಾಥ, ಕುಂದಾಪುರ ಗಾಣಿಗ ಸಂಘದ ಅಧ್ಯಕ್ಷ ಪ್ರಭಾಕರ್ ಕುಂಭಾಶಿ, ಉತ್ತರ ಕನ್ನಡ ಗಾಣಿಗ ಸಮಾಜದ ಅಧ್ಯಕ್ಷ ದಾಮೋದರ ಶೆಟ್ಟಿ, ಸಂಪರ್ಕಸುಧಾ ಪತ್ರಿಕೆಯ ಅಧ್ಯಕ್ಷ ಎಸ್.ಕೆ. ಪ್ರಾಣೇಶ್, ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಗಣೇಶ್ ಜಿ. ಚೆಲ್ಲಿಮಕ್ಕಿ, ಬೆಂಗಳೂರು ವೇಣುಗೋಪಾಲಕೃಷ್ಣ ಸೊಸೈಟಿ ಅಧ್ಯಕ್ಷ ಎಂ. ಗೋಪಾಲಕೃಷ್ಣ ಹಾಗೂ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಉಪಾಧ್ಯಕ್ಷ ಉದಯ ಕುಮಾರ್, ಅನ್ನಪೂರ್ಣೇಶ್ವರೀ ಮಹಿಳಾ ಸಂಘದ ಅಧ್ಯಕ್ಷೆ ಜಯಂತಿ ವಾಸುದೇವ್ ಉಪಸ್ಥಿತರಿದ್ದರು.
ಸಂಘಟನೆಯ ಖಜಾಂಚಿ ರಘುರಾಮ್ ಬೈಕಾಡಿ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ರಾಮಕೃಷ್ಣ ಹಾರಾಡಿ, ಯೋಗೀಶ್ ಕೊಳಲಗಿರಿ ಸಾಧಕರನ್ನು ಪರಿಚಯಿಸಿದರು. ಉಪಾಧ್ಯಕ್ಷ ಸೂರ್ಯನಾರಾಯಣ ಗಾಣಿಗ ವಂದಿಸಿದರು.