ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಅಂತಾರಾಷ್ಟ್ರೀಯ ಸಂಘಟನೆ ಆದರೂ ಸ್ಥಳೀಯವಾಗಿ ಸಮಸ್ಯೆಗಳಿಗೆ ಸ್ಪಂದಿಸಿ, ಕ್ರೀಡೆ, ಸಾಂಸ್ಕೃತಿಕ, ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ರೋಟರಿ, ಲಯನ್ಸ್, ಜೇಸಿಐ, ರೆಡ್‌ಕ್ರಾಸ್‌ನಂತಹ ಸಂಸ್ಥೆಯವರದು ಸೇವೆ ಎನಿಸುತ್ತದೆ. ಇಂತಹ ಸಂಘಟನೆಗಳ ಮೂಲಕ ಸೇವೆಯಲ್ಲಿ ತೊಡಗಿಸಿಕೊಳ್ಳಬಹುದು, ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬಹುದು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ರವಿವಾರ ಇಲ್ಲಿನ ಈಸ್ಟ್ ವೆಸ್ಟ್ ಕ್ಲಬ್‌ನಲ್ಲಿ ರೋಟರಿ ಕ್ಲಬ್ ಮಿಡ್‌ಟೌನ್ ಸಾರಥ್ಯದಲ್ಲಿ ರೋಟರಿ ಜಿಲ್ಲಾ ಸಾಂಸ್ಕೃತಿಕ ಉತ್ಸವ ದಿಗಣ ಕುಂದ ನೆಲೆಯಲಿ ಕಲೆಯ ಅಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೋಟರಿ ಕ್ಲಬ್ ಮಿಡ್‌ಟೌನ್ ಕುಂದಾಪುರದ ಅಧ್ಯಕ್ಷ ಶೇಖರ್ ಎನ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಗವರ್ನರ್ ದೇವ್ ಆನಂದ್, ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾದ ಕೆ. ಫಾಲಾಕ್ಷ, ಜಿಲ್ಲಾ ಗವರ್ನರ್ ಆಗಿ ನಾಮಿನಿಯಾದ ಬಿ.ಎಂ.ಭಟ್, ಸಹಾಯಕ ಗವರ್ನರ್ ಡಾ| ಬಿ. ರಾಜೇಂದ್ರ ಶೆಟ್ಟಿ, ಜಿಲ್ಲಾ ಸಾಂಸ್ಕೃತಿಕ ಸಮಿತಿ ಜಿಲ್ಲಾ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ವೈ., ಉಪಾಧ್ಯಕ್ಷ ಧರ್ಮೇಂದ್ರ ಸಿಂಗ್, ಝೋನಲ್ ಲೆಫ್ಟಿನೆಂಟ್ ಮಹೇಂದ್ರ ಶೆಟ್ಟಿ, ಝೋನಲ್ ಲೆಫ್ಟಿನೆಂಟ್ ವೆಂಕಟೇಶ್ ನಾವುಂದ, ಪ್ರದೀಪ್ ಡಿ.ಕೆ., ವಿವಿಧ ರೋಟರಿ ಕ್ಲಬ್‌ಗಳ ಅಧ್ಯಕ್ಷರಾದ ಕುಂದಾಪುರದ ಲಿಯಾಖತ್ ಅಲಿ, ಕುಂದಾಪುರ ದಕ್ಷಿಣದ ಝುಡಿತ್ ಮೆಂಡೋನ್ಸಾ, ಕುಂದಾಪುರ ಸನ್‌ರೈಸ್‌ನ ಪ್ರಶಾಂತ ಹವಾಲ್ದಾರ್, ಗಂಗೊಳ್ಳಿಯ ಚಂದ್ರಕಲಾ ತಾಂಡೇಲ, ಸಿದ್ದಾಪುರದ ಸಿಹಾಸ್ ಚಾತ್ರ, ಬಂದೂರಿನ ಮೋಹನ್ ರೇವಣ್ಕರ್, ಮಿಡ್‌ಟೌನ್‌ನ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕೋಶಾಽಕಾರಿ ಶಿವರಾಮ ಶೆಟ್ಟಿ, ಸಂಯೋಜಕ ಶಶಿಧರ ಶೆಟ್ಟಿ, ಕಾರ್ಯಕ್ರಮ ಕಾರ್ಯದರ್ಶಿ ನಳಿನ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಮಿತಿ ಅಧ್ಯಕ್ಷ ರವಿಶಂಕರ್ ಕೆ. ಸ್ವಾಗತಿಸಿ, ರಂಜಿತ್ ಕುಮಾರ್ ಶೆಟ್ಟಿ, ಸಚಿನ್ ಕುಮಾರ್ ಶೆಟ್ಟಿ ನಿರ್ವಹಿಸಿದರು.