ಕುಂದಾಪುರ ಸಿಪಿಎಂ ಸಮ್ಮೇಳನ ಉದ್ಘಾಟನೆ

0
94

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ನವ ಉದಾರವಾದಿ ಆರ್ಥಿಕ ನೀತಿಗಳು ಈ ದೇಶದ ಸಾಮಾನ್ಯ ಜನತೆಯನ್ನು ಬಡತನಕ್ಕೆ ದೂಡಿದೆ ಇದರ ಲಾಭಗಳನ್ನು ದೊಡ್ಡ ಬಂಡವಾಳಗಾರರು ಪಡೆಯುತ್ತಿದ್ದು ಸಂಪತ್ತಿನ ಅಸಮಾನ ಹಂಚಿಕೆ ತೀವ್ರ ಹೆಚ್ಚಳ ಆಗುತ್ತಿರುವುದು  ಕಾಣಬಹುದಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿದರು.
ಅವರು ಸಿಪಿಎಂ ಕುಂದಾಪುರ ವಲಯ 4ನೇ ಸಮ್ಮೇಳನವನ್ನು ರವಿವಾರ ಹಂಚು ಕಾರ್ಮಿಕರ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ದುಡಿಯುತ್ತಿರುವ ಕಾರ್ಮಿಕನ ವೇತನ ಹಾಗೂ ಕಾರ್ಮಿಕರನ್ನು ದುಡಿಸುವ ಮುಖ್ಯಸ್ಥರ ವೇತನಗಳು ಇದೇ ಕಾರಣಕ್ಕೆ ಅಜಗಜಾಂತರ ವ್ಯತ್ಯಾಸಗಳಿವೆ ಎಂಬ ಅಂಶಗಳನ್ನು ಇತ್ತೀಚಿನ ವರದಿಗಳು ಹೇಳುತ್ತಿವೆ ಈ ಅಸಮಾನತೆಗಳನ್ನು ಸಿಪಿಎಂ ವಿರೋಧಿಸುತ್ತದೆ ಮಾತ್ರವಲ್ಲದೆ ಅಸಮಾತೆ ಕೊನೆಗಾಣಿಸುವರೆಗೆ ಸಿಪಿಎಂ ಪಕ್ಷ ನಿರಂತರ ಹೋರಾಟ ನಡೆಸುತ್ತದೆ ಎಂದು ಅವರು ಹೇಳಿದರು.
ಸಮ್ಮೇಳನದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುರೇಶ್ ಕಲ್ಲಾಗರ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಿಪಿಐ (ಎಂ) ಹಿರಿಯ ಮುಖಂಡ ವಿ ನರಸಿಂಹ ಧ್ವಜಾರೋಹಣ ನೆರವೇರಿಸಿದರು.
ಪಕ್ಷದ ಕಾರ್ಯದರ್ಶಿ ಎಚ್ ನರಸಿಂಹ ಮೂರು ವರ್ಷಗಳ ಕರಡು ವರದಿ ಮಂಡಿಸಿದರು ವರದಿ ಮೇಲೆ ಪ್ರತಿನಿಧಿಗಳು ಚರ್ಚಿಸಿ ಅಂಗೀಕಾರ ಮಾಡಿದರು.
ಶ್ರದ್ಧಾಂಜಲಿ ಠರಾವು ಗಣೇಶ್ ಮಂಡಿಸಿದರು.
ಸಮ್ಮೇಳನ ಕುಂದಾಪುರ ಸರ್ವತೋಮುಖ ಅಭಿವೃದ್ಧಿ ಸಂಬಂಧಿಸಿದಂತೆ ಕೆಲವು ನಿರ್ಣಯಗಳನ್ನು ಕೈಗೊಂಡಿತು.
ಮುಂದಿನ ಮೂರು ವರ್ಷದ ಅವಧಿಗೆ ನೂತನ ತಾಲೂಕು ಸಮಿತಿ ಯನ್ನು ಸಮ್ಮೇಳನ ಆಯ್ಕೆ ಮಾಡಿತು.ನೂತನ ಸಮಿತಿಯು ಕುಂದಾಪುರ ತಾಲೂಕು ಸಮಿತಿಗೆ ಕಾರ್ಯದರ್ಶಿಯಾಗಿ ಚಂದ್ರಶೇಖರ ವಿ ಅವರನ್ನು ಆಯ್ಕೆ ಮಾಡಿತು.

LEAVE A REPLY

Please enter your comment!
Please enter your name here