ಕುಂದಾಪುರ ಮಿರರ್ ಸುದ್ದಿ…
ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನಕ್ಕೆ ರೋಟರಿ ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ಎಂಜಿ ರಾಮಚಂದ್ರಮೂರ್ತಿ (ಶಿವಮೊಗ್ಗ)ಅವರ ಅಧಿಕೃತ ಭೇಟಿಯ ಅಹಿನ್ನಲ್ಲೆಯಲ್ಲಿ ಸಾರ್ವಜನಿಕ ಸಮಾರಂಭ ಚೇತನ ಪ್ರೌಢಶಾಲೆಯ ಸಭಾಂಗಣದಲ್ಲಿ ಜರುಗಿತು.
ಕರ್ನಾಟಕ ಪುಷ್ಭ ರಂಗೋಲಿಯಲ್ಲಿ ದೀಪಗಳನ್ನು ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಯಶೋದ ಸಿ ಹೊಳ್ಳ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಗವರ್ನರ್ ಪರಿಚಯವನ್ನು ರೋಟರಿ ನಿಕಟಪೂರ್ವ ಅಧ್ಯಕ್ಷ ವೆಂಕಟೇಶ್ ಭಟ್ ಮಾಡಿದರು.ವಲಯ ಪ್ರತಿನಿಧಿ ವಿಜಯ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ವಲಯ 3ರ ಸಹಾಯಕ ಗವರ್ನರ್ ಕೆ ಪದ್ಮನಾಭ ಕಾಂಚನ್ ಕ್ಲಬ್‍ನ ಮುಖವಾಣಿ ‘ಹಂಸ’ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಶುಭಹಾರೈಸಿದರು. ಹಂಸ ಸಂಚಿಕೆಯ ಸಂಪಾದಕ ಮುರಳಿಧರ್ ನಾಯರಿ ಸಹಕರಿಸಿದರು. ಈ ಸಂದರ್ಭದಲ್ಲಿ ರೋಟರಿ ದತ್ತಿನಿಧಿಗೆ ದೇಣಿಗೆ ನೀಡಲಾಯಿತು. ರಾಜಾರಾಮ ಐತಾಳ ಆಹ್ವಾನಿತ ಗಣ್ಯರನ್ನು ಗುರುತಿಸಿದರು.
ಕಾರ್ಯದರ್ಶಿ ವಿಘ್ನೇಶ್ವರ ಅಡಿಗ ವಂದನಾರ್ಪಣೆ ಮಾಡಿದರು ಸದಸ್ಯ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.