ಕುಂದಾಪುರ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಶಾಶ್ವತ ನಿರಾತಂಕಕ್ಕೆ ಮನವಿ

0
889

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ನೆಹರೂ ಮೈದಾನ ಗತಕಾಲದಿಂದಲೂ ಯಕ್ಷರಾತ್ರಿಗೆ ಹೆಸರು. ಪ್ರದರ್ಶನಕ್ಕೂ ಕಿಕ್ಕಿರಿದ ಜನಸಂದಣಿ. ದೂರದ ಊರಿಂದ ಆಗಮಿಸುವ ಕಲಾಭಿಮಾನಿಗಳಿಗೆ ಈವರೆಗೆ ರಸದೌತಣ ನೆಹರೂ ಮೈದಾನ ನೀಡಿತ್ತು. ಇತ್ತೀಚೆಗೆ ಕೆಲವು ವರ್ಷಗಳಿಂದ ಪ್ರತೀ ವರ್ಷ ಪ್ರದರ್ಶನಕ್ಕೆ ಪರವಾನಿಗೆ ಕಿರಿಕಿರಿ ಕಲಾಭಿಮಾನಿಗಳಿಗೆ ನಿರಂತರವಾಗಿತ್ತು. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹಲವರಿಂದ ಸಂಬಂಧ ಪಟ್ಟ ಅಧಿಕಾರಿಗೆ ಈವರೆಗೆ ಹಲವು ಒತ್ತಡಗಳೂ ಬಂದರೂ ಕಾರ್ಯ ಸಾಧನೆಯಾಗಲಿಲ್ಲ. ಯಕ್ಷಗಾನ ಪ್ರದರ್ಶನಕ್ಕಾಗಿ ನಿರಂತರ ಅವಕಾಶಕ್ಕಾಗಿ ಕಿಶನ್ ಹೆಗಡೆ ಹಾಗೂ ಇತರ ಯಕ್ಷ ಕಲಾಭಿಮಾನಿಗಳು ಸಹಾಯಕ ಕಮಿಷನರ್ ಕುಂದಾಪುರ ಇವರಿಗೆ ಮನವಿ ಮಾಡಿದರು.

Click Here

Click Here

ದೇಶ ವಿದೇಶಗಳಲ್ಲಿ ಅಗ್ರ ಪಂಕ್ತಿಯಲ್ಲಿ ಮಾನ್ಯತೆ ಪಡೆದ ಯಕ್ಷಕಲೆಯನ್ನು ಸರಕಾರವೂ ಗೌರವಿಸುತ್ತದೆ. ಆ ಕಾರಣಕ್ಕಾಗಿಯೇ ಪ್ರತ್ಯೇಕ ಯಕ್ಷಗಾನ ಅಕಾಡೆಮಿ ನಿರ್ಮಾಣ ಮಾಡಿದೆ. ಅಲ್ಲದೇ ಉಡುಪಿ ಜಿಲ್ಲೆಯಲ್ಲಿಯೂ ಯಕ್ಷಗಾನ ಅಕಾಡೆಮಿ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿರುವುದು ಯಕ್ಷಗಾನಕ್ಕೆ ಸಂಧ ಗೌರವ. ಕುಂದಾಪುರದ ಯಕ್ಷಗಾನ ಪ್ರದರ್ಶನವೂ ಹೊಸ ಆವಿಷ್ಕಾರದೊಂದಿಗೆ ಹೊಸತನವನ್ನು ರೂಪಿಸುವ ಕ್ಷೇತ್ರವಾಗಿದೆ. ಯಾಕೆಂದರೆ ಅಲ್ಲಿಯ ಯಕ್ಷಗಾನಕ್ಕೆ ಅತೀವ ಜನಸಂದಣಿಯಿಂದ ಕೂಡಿದ ಪ್ರದರ್ಶನವಾಗುವುದು ಖಚಿತ. ಇಂತಹ ಕಲೆಯ ಹೊಸ ಹುರುಪನ್ನು ಹುಟ್ಟುಹಾಕುವ ಕ್ಷೇತ್ರವಾದ ಕುಂದಾಪುರದಲ್ಲಿ ಕರಾವಳಿಯ ಯಕ್ಷಗಾನಕ್ಕೆ ಪ್ರಾಶಸ್ತ್ಯ ಕೊಟ್ಟು ಅವಕಾಶ ಕಲ್ಪಿಸಿಕೊಡಬೇಕಾದುದು ಯಕ್ಷಗಾನಾಭಿಮಾನಿಗಳ ಹೊಣೆ. ಸಾರ್ವಜನಿಕರಿಗೆ ಅತೀ ಅಗತ್ಯವಾದ ಕುಂದಾಪುರದಲ್ಲಿ ಯಕ್ಷಗಾನ ಕಲೆಯ ಪ್ರಸಾರ, ಪ್ರಗತಿಗಾಗಿ ಪ್ರದರ್ಶನಕ್ಕೆ ಅನುಮತಿಯನ್ನು ಕೊಡುವ ಮುಖೇನ ಕಲೆಯನ್ನೂ, ಕಲಾವಿದರನ್ನೂ ಗೌರವಿಸಿದಂತಾಗುತ್ತದೆ. ದೇಶ-ವಿದೇಶದಲ್ಲಿ ಪ್ರಸಿದ್ಧಿಯಾದ ಯಕ್ಷಕಲೆಗೆ ಮುಕ್ತ ಮನಸ್ಸಿನಿಂದ ಸಮಸ್ಯೆ ಉಲ್ಬಣಿಸುವ ಮೊದಲೇ ಶಾಶ್ವತ ಅನುಮತಿ ನೀಡಬೇಕೆಂದು ಯಕ್ಷಾಭಿಮಾನಿಗಳು ವಿನಂತಿಸಿದರು.
ಪ್ರಸ್ತುತ ವರ್ಷ ಸಮಸ್ಯೆ ಮರುಕಳಿಸಿದರೆ ಯಕ್ಷಾಭಿಮಾನಿಗಳು ಸಹಿಸಲಾರರು. ಪ್ರತಿಭಟನೆಗೆ ಇಳಿಯುವ ಮುನ್ನವೇ ತಿಳಿಗೊಳಿಸಬೇಕಾಗಿ ಮನವಿ ಸಲ್ಲಿಸಿದರು. ಪಂಚ ಮೇಳಗಳ ಯಜಮಾನರಾದ ಪಳ್ಳಿ ಕಿಶನ್ ಹೆಗ್ಡೆ, ಕಲಾಕ್ಷೇತ್ರ ಕುಂದಾಪುರ ಅಧ್ಯಕ್ಷ ಕಿಶೋರ್ ಹೆಗ್ಡೆ, ಸಂಘಟಕ ರಾಮಕೃಷ್ಣ ಹೇರ್ಳೆ, ಶಶಿಧರ ಹೆಮ್ಮಾಡಿ, ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಕಾರ್ಯದರ್ಶಿ ವೆಂಕಟೇಶ ವೈದ್ಯ, ಸಂಘಟಕ ಪ್ರಶಾಂತ್ ಮಲ್ಯಾಡಿ, ಕೋಟೇಶ್ವರ ಪಂ. ಸದಸ್ಯ ರಾಜಶೇಖರ ಶೆಟ್ಟಿ, ರೈಸನ್ ಡಿ’ಮೆಲ್ಲೋ, ನರಸಿಂಹ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here