ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸುಮಾರು ಐವತ್ತೈದು ವರ್ಷಗಳಿಂದ ಏಳು ಸಾವಿರದಷ್ಟು ವಿದ್ಯಾರ್ಥಿಗಳಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡುವ ಮೂಲಕ ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ಉಚಿತ ಊಟ, ಬಟ್ಟೆ ಮತ್ತು ವಸತಿಯೊಂದಿಗೆ ಶಿಕ್ಷಣ ನೀಡುತ್ತಾ ಬಂದಿರುವ ಜಾಮಿಯಾ ಸಅದಿಯ ಅರೇಬಿಯಾ ಕಾಲೇಜು ಕಾಸರಗೋಡು, ಇಲ್ಲಿ ಇದೇ ನವಂಬರ್ ತಿಂಗಳ 22 ,23 ಮತ್ತು 24 ರಂದು ನಡೆಯುವ 55ನೇ ವರ್ಷದ ಸನದುದಾನ ಮಹಾ ಸಮ್ಮೇಳನದ ಪ್ರಚಾರಾರ್ಥವಾಗಿ ಉಡುಪಿಯ ಮಣಿಪಾಲ್ ಇನ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಸ್ವಾಗತ ಸಮಿತಿಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ನಾಯಕತ್ವದಲ್ಲಿ ಸರಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಮಹತ್ತರವಾಗಿ ಪರಿವರ್ತನೆಗೆ ಶ್ರಮಿಸಿದ ಉಡುಪಿ ಜಿಲ್ಲಾ ಎಸ್. ಡಿ. ಎಂ.ಸಿ.ಸಿ. ಸಿ.ಎಫ್ ಉಡುಪಿ ಜಿಲ್ಲಾಧ್ಯಕ್ಷರಾದ ಹಾಗೂ ಕರ್ನಾಟಕ ರಾಜ್ಯ ನಿರ್ದೇಶಕರಾದ ಅಬ್ದುಲ್ ಸಲಾಂ ಚಿತ್ತೂರು ಇವರನ್ನು ಸಂಸ್ಥೆಯ ಪ್ರಾಂಶುಪಾಲರಾದ ಕೆ. ಕೆ ಉಸ್ತಾದ್ ರವರು ಸನ್ಮಾನಿಸಿ ಗೌರವಿಸಿದರು.
ಕಾಪು ಖಾಝಿ ಅಹ್ಮದ್ ಖಾಸಿಮಿ, ಉಲಮಾ ನಾಯಕರಾದ ಇಸ್ಮಾಯಿಲ್ ಮದನಿ ಮಾವಿನಕಟ್ಟೆ ಮದನಿ, ಮುಸ್ತಫಾ ಸಅದಿ, ಕಲ್ಕಟ್ಟ ರಝ್ವಿ ಹಾಗೂ ಮತ್ತಿತರ ಉಲಮಾ,ಉಮರಾ ನಾಯಕರು ಹಾಜರಿದ್ದರು.