ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ನನ್ನ ಕಲಾ ಜೀವನದ 30ರ ಸಂಭ್ರಮವನ್ನು ತೊಂಬಟ್ಟು ಯಕ್ಷಯಾನದ 30ರ ವಿಶ್ವ ಸಂಭ್ರಮವನ್ನು ನನ್ನ ಗೃಹನಿರ್ಮಾಣದ ಸಹಾಯಾರ್ಥವಾಗಿ ಇದೇ ನವೆಂಬರ್ 17ರಂದು ಸಂಜೆ 6.30ಕ್ಕೆ ಸಿದ್ಧಾಪುರದ ರಂಗನಾಥ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಹಾಲಾಡಿ ಮೇಳದ ಪ್ರಧಾನ ಕಲಾವಿದ ವಿಶ್ವನಾಥ ಆಚಾರ್ಯ ತೊಂಬಟ್ಟು ಹೇಳಿದರು.
ಅವರು ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಅವರ ಆಶೀರ್ವಾದದೊಂದಿಗೆ, ಮೇಳದ ಯಜಮಾನರ ಸಂಪೂರ್ಣ ಸಹಕಾರದೊಂದಿಗೆ ಈ ಕಾರ್ಯಕ್ರಮ ಜರುಗಲಿದೆ. ಆ ದಿನ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಸಿದ್ಧಾಪುರ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಗಂಗಾ ನಂದನ ಹಾಗೂ ಅಗ್ನಿ ನಂದನೆ ಎನ್ನುವ ಪೌರಾಣಿಕ ಪ್ರಸಂಗಗಳ ಪ್ರದರ್ಶನ ನಡೆಯಲಿದೆ.
ಈ ಸಂದರ್ಭದಲ್ಲಿ ಸಂಕ್ಷೀಪ್ತ ಸಭಾ ಕಾರ್ಯಕ್ರಮ ನಡೆಯಲಿದ್ದು ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕಲಾವಿದರ ಕಾಮಧೇನು ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಶಂಕರ ಐತಾಳ್ ಅಮಾಸೆಬೈಲು ಮೊದಲಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಎಂ.ಕೆ.ರಮೇಶ ಆಚಾರ್ಯ, ಶಿಕ್ಷಕರಾದ ತಿಮ್ಮಪ್ಪ ನಗರ, ಸಮಾಜ ಸೇವಕ ಬೆಂಕಿಮಣಿ ಸಂತೋಷ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದರು.
ಸುದ್ಧಿಗೋಷ್ಠಿಯಲ್ಲಿ ಹಾಸ್ಯ ಕಲಾವಿದ ರವೀಂದ್ರ ದೇವಾಡಿಗ ಕಮಲಶಿಲೆ, ಧರ್ಮಸ್ಥಳ ಮೇಳದ ಸ್ತ್ರೀ ವೇಷ ಕಲಾವಿದ ಶರತ್ ಶೆಟ್ಟಿ ತೀರ್ಥಹಳ್ಳಿ ಉಪಸ್ಥಿತರಿದ್ದರು.