ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಬಂಟ್ವಾಡಿ ಶಾಲೆಯ ಹಳೆ ವಿದ್ಯಾರ್ಥಿ ಸಂಘವು ಶಾಲೆಯನ್ನು ಉಳಿಸಿ ಮಕ್ಕಳಿಗೆ ಉಚಿತ ಶಿಕ್ಸಣ ನೀಡುವ ಸಲುವಾಗಿ ಹಮ್ಮಿಕೊಂಡ “ನಮ್ಮ ಶಾಲೆ ನಮ್ಮ ಹೆಮ್ಮೆ ” ಅಭಿಯಾನದ ಕಾರ್ಯಕ್ರಮ ಶಾಲಾ ಸಂಚಾಲಕ ಬಿ.ಅರುಣಕುಮಾರ ಶೆಟ್ಟಿಯವರ ಅದ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಲಯನ್ಸ್ ಜಿಲ್ಲಾ 317Cಯ ಪ್ರಥಮ ಉಪರಾಜ್ಯಪಾಲ ಲಯನ್ ಸಪ್ನಾ ಸುರೇಶ ಲಯನ್ಸ್ ಸಮಾಜಮುಖಿ ಸೇವೆಗಳನ್ನು ವಿವರಿಸಿದರು.
ಹಳೆ ವಿದ್ಯಾರ್ಥಿ ಸಂಘದ ಮುಂದಾಳು ಹಂಗಳೂರು ಲಯನ್ಸ್ ಕ್ಲಬ್‌ನ ಉಪಾಧ್ಯಕ್ಷ ಲಯನ್ ಸಂದೀಪ ಶೆಟ್ಟಿ ಮತ್ತು ಲಯನ್ ಅಧ್ಯಕ್ಸ ರೋವನ್ ಡಿ’ ಕೊಸ್ತಾ ಶಾಲೆಗೆ ದೇಣಿಗೆ ನೀಡಿದರು.
ಸಂಘದ ಸದಸ್ಯರು ಮಕ್ಕಳಿಗೆ ಬೆಲ್ಟ್ ಮತ್ತು ಟೈ ವಿತರಿಸಿದರು. ವಲಯಾಧ್ಯಕ್ಸ ಲಯನ್ ಬಾಲಕೃಷ್ಣ ಶೆಟ್ಟಿಯವರು ಅನುದಾನಿತ ಶಾಲೆ ಅನುಭವಿಸುವ ಕಷ್ಟ ಮತ್ತು ತೊಂದರೆಗಳನ್ನು ಪರಿಹರಿಸುವಲ್ಲಿ ಈ ಸಂಘ ಮಾಡುತ್ತಿರುವ ಸೇವೆ ಶ್ಲಾಘನೀಯ ಎಂದರು.
ಸಭೆಯಲ್ಲಿ ಲಯನ್ಸ್ ಸದಸ್ಯರು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು.