ಕೋಟತಟ್ಟು – ಹೆಜ್ಜೇನು ದಾಳಿ

0
176

ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕೋಟತಟ್ಟು ಪರಿಸರದಲ್ಲಿ ಹೆಜ್ಜೇನು ದಾಳಿಗೆ ಈರ್ವರು ಸ್ಥಿತಿ ಗಂಭೀರವಾಗಿದೆ.

ಕೋಟತಟ್ಟು ಗ್ರಾ.ಪಂ ಉಪಾಧ್ಯಕ್ಷೆ ಸರಸ್ವತಿ ಹಾಗೂ ಪುತ್ರಿ ಸೌಜನ್ಯ ಇವರು ದಾಳಿಗೆ ತುತ್ತಾದವರು. ಗುರುವಾರ ಮುಂಜಾನೆ ಈ ಇರ್ವರು ತನ್ನ ಮೂಲ ನಾಗಬನಕ್ಕೆ ಪ್ರಾರ್ಥನೆ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ಹೆಜ್ಜೇನು ಪೂರ್ಣಪ್ರಮಾಣದಲ್ಲಿ ದಾಳಿಗೈದಿದ್ದು ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಮತ್ತಿತರ ಸ್ಥಳೀಯರು ಧಾವಿಸಿ ಜೀವದ ಹಂಗು ತೋರೆದು ಜೇನು ದಾಳಿಗೊಳಗಾದವರ ಮೈಮೇಲೆ ಗೋಣಿಚೀಲ ಹಾಗೂ ಬಟ್ಟೆ ಹಾಕಿಸಿ ಪ್ರಥಮ ಚಿಕಿತ್ಸೆಯನ್ನು ನೀಡಿದ್ದಾರೆ.

Click Here

Click Here

ದಾಳಿ ಹೇಗೆ ಎಲ್ಲಿ
ಮುಂಜಾನೆ ಕೋಟತಟ್ಟು ತುಂಗರ ಮನೆ ಸಮೀಪವಿರುವ ನಾಗಬನಕ್ಕೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ತಾಯಿ ಸರಸ್ವತಿ ಪುತ್ರಿ ಸೌಜನ್ಯ ತೆರಳುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಕೀರುಚುತಾ ಓಡೋಡಿ ಬಂದ ಈರ್ವರನ್ನು ಕಂಡು ಸ್ಥಳೀಯರೇ ಆಂತಕಕ್ಕೆ ಒಳಗಾದರು.ಈ ವೇಳೆ ಅದೇ ದಾರಿಯಲ್ಲಿ ಸಂಚರಿಸಿಕೊಂಡು ಬರುತ್ತಿದ್ದ ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ತಮ್ಮ ಜೀವ ಲೆಕ್ಕಿಸದೆ ಅವರ ಸಹಾಯಕ್ಕೆ ನಿಂತ್ತಿದ್ದು ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ. ಕೋಟದ ನಾಗರಾಜ್ ಪುತ್ರನ್ ಜೀವನ್ ಮಿತ್ರ ಆಂಬ್ಯುಲೇನ್ಸ್ ಮೂಲಕ ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾವಿರಾರು ಜೇನುಗಳು
ಆ ಪರಿಸರದ ಮರದ ಕೊಂಬೆಯಲ್ಲಿ ಗೂಡು ಕಟ್ಟಿಕೊಂಡದ್ದ ಜೇನುಗಳು ಏಕಾಏಕಿ ಪಾರ್ಥನೆ ಸಲ್ಲಿಸುವವರ ಮೇಲೆ ದಾಳಿ ಮಾಡಿದೆ.ಮೈತುಂಬ ಕಂಚಿಕೊಂಡ ಜೇನುಗಳನ್ನು ತೆಗೆಯಲು ಸ್ಥಳೀಯರು ಹರಸಾಹಸ ಪಡಬೇಕಾಯಿತು.ರಕ್ಷಣೆಗೆ ನಿಂತ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಮೇಲೆ ಸಾಕಷ್ಟು ಜೇನುಗಳು ದಾಳಿ ಮಾಡಿವೆ.

Click Here

LEAVE A REPLY

Please enter your comment!
Please enter your name here