ಕುಂದಾಪುರ :ಅಂಪಾರು ವ್ಯವಸಾಯಿಕ ಸೇವಾ ಸಹಕಾರಿ ಸಂಘದಲ್ಲಿ ಅವ್ಯಹಾರವಾದ ಹಣ ವಸೂಲಾಗಿದೆ: ಅಪಪ್ರಚಾರಕ್ಕೆ ಕಿವಿಗೊಡಬೇಡಿ – ಮೋಹನ್ ವೈದ್ಯ

0
211

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಅಂಪಾರು ವ್ಯವಸಾಯಿಕ ಸೇವಾ ಸಹಕಾರಿ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ನಡೆಸಿದ ರೂ.3.65 ಕೋಟಿ ಹಣ ಅವ್ಯಹಾರವಾದ ಹಣವನ್ನು ಮರಳೀ ಸಂಘಕ್ಕೆ ಕಟ್ಟಿಸಿಕೊಳ್ಳಲಾಗಿದ್ದು ಸಂಘದ ಬಗ್ಗೆ ಠೇವಣಿದಾರರರಿಗೆ, ಸದಸ್ಯರಿಗೆ ಯಾವುದೇ ಭಯ ಬೇಡ, ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ಸಂಘದಲ್ಲಿ ಹಣ ದುರುಪಯೋಗವಾಗಿರುವುದು ಸತ್ಯ. ಈ ಬಗ್ಗೆ ಅನುಮಾನಗೊಂಡು ಆಡಳಿತ ಮಂಡಳಿಯೇ ಆಡಿಟರ್ ಅವರಲ್ಲಿ ಸಂಶಯ ವ್ಯಕ್ತ ಪಡಿಸಿದಾಗ ಅವರ ಸೂಚನೆಯಂತೆ ತಂತ್ರಾಂಶ ಲಾಕ್ ಮಾಡಿಸಿಕೊಂಡು ಪರಿಶೀಲನೆ ನಡೆಸಿದಾಗ 2015ರಿಂದ ಹಣ ದುರುಪಯೋಗವಾಗಿರುವುದು ನಮ್ಮ ಗಮನಕ್ಕೆ ಬಂತು. ಆಗ ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿದ್ದವರು ಸ್ವತಃ ಹಣ ದುರುಪಯೋಗ ಆಗಿದ್ದು ಸತ್ಯ, ಇದರಲ್ಲಿ ಬೇರೆ ಯಾರೂ ಶಾಮೀಲಾಗಿಲ್ಲ. ನಾನೇ ಹಣವನ್ನು ತುಂಬಿ ಕೊಡುವುದಾಗಿ ತಿಳಿಸಿದ್ದು ಅಂತೆಯೇ ಅವರ ಆಸ್ತಿಯ ಆಧಾರದ ಮೇಲೆ 3ಕೋಟಿ ಸಾಲ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಮೋಹನ್ ವೈದ್ಯ ಹೇಳಿದರು.

ಅವರು ಬುಧವಾರ ಅಂಪಾರು ಮಹಿಷಾಮರ್ದಿನಿ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸೆಪ್ಟೆಂಬರ್ ನಂತರ ಹಣ ಪಾವತಿಯಾದ್ದರಿಂದ ಈ ವರ್ಷದ ವ್ಯವಹಾರದಲ್ಲಿ ತೋರಿಸಲಾಗಿಲ್ಲ. ಈ ಬಗ್ಗೆ ಸಹಕಾರ ಇಲಾಖೆಯ ಮಟ್ಟದಲ್ಲಿ ತನಿಖೆಯೂ ಕೂಡಾ ನಡೆಯುತ್ತಿದೆ ಎಂದರು.

ಈ ಪ್ರಕರಣದಲ್ಲಿ ಯಾವುದೇ ಆಡಳಿತ ಮಂಡಳಿಯ ಸದಸ್ಯರಾಗಲಿ, ಬೇರೆ ಸಿಬ್ಬಂದಿಯಾಗಲಿ ಶಾಮೀಲಾಗಿಲ್ಲ. ನಾವೆಲ್ಲರೂ ಸಂಘವನ್ನು ಪಾರದರ್ಶಕವಾಗಿ ಮುನ್ನೆಡಿಸಿಕೊಂಡು ಹೋಗಲು ಬದ್ಧರಿದ್ದೇವೆ. ಸದಸ್ಯರು, ಠೇವಣಿದಾರರು ಆತಂಕ ಪಡುವ ಅಗತ್ಯವಿಲ್ಲ ಎಂದರು.

Click Here

Click Here

ಮುಂದಿನ ವರ್ಷ ಹೆಚ್ಚಿನ ಲಾಭಾಂಶದ ನಿರೀಕ್ಷೆಯಿದೆ. ಈ ಬಗ್ಗೆ ವಿಶೇಷ ಮಹಾಸಭೆ ಕರೆಯಲಾಗುವುದು. ಈಬಾರಿಯ ಡಿವಿಡೆಂಡ್ ಸೇರಿಸಿ ಮುಂದಿನ ಸಾಲಿನಲ್ಲಿ ನೀಡಲಾಗುವುದು ಎಂದರು.

ಸಂಘದ ಉಪಾಧ್ಯಕ್ಷ ಅಶೋಕ್ ನಾಯ್ಕ್ ಮಾತನಾಡಿ, ಹಣ ದುರುಪಯೋಗ ಆಗಿದ್ದು ಗೊತ್ತಾಗುತ್ತಿದ್ದಂತೆ ಅಧ್ಯಕ್ಷರೇ ಆಡಿಟ್ ಅವರಲ್ಲಿ ಹೆಚ್ಚಿನ ಪರಿಶೀಲನೆಗೆ ಒತ್ತಾಯಿಸಿದ್ದಾರೆ. ಎರಡು ಲಾಗಿನ್ ಬಳಿಸಿಕೊಂಡು ಫೇಕ್ ಅಕೌಂಟ್ ತೆರೆದು ಅವ್ಯವಹಾರ ಮಾಡಿದ್ದಾರೆ. 3.65 ಕೋಟಿ ಅವ್ಯಹಾರವಾಗಿರುದನ್ನು ಕರಡು ವರದಿಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಹಣದ ವಸೂಲಾತಿಯೂ ಆಗಿದೆ. ಇತ್ತೀಚೆಗೆ ಈ ವಿಚಾರವಾಗಿ ಸ್ವಾಭಿಮಾನಿ ಸಹಕಾರಿಗಳು ನಡೆಸಿದ ಪ್ರತಿಭಟನೆಯಲ್ಲಿ ಪ್ರತಿಭಟನಾನಿರತರು ಮಾಡಿದ ಆರೋಪಗಳು ಸತ್ಯಕ್ಕೆ ದೂರಾಗಿದ್ದು, ಹಣ ದುರುಪಯೋಗದ ವಿಚಾರ ಈಗಾಗಲೇ ತನಿಖೆ ನಡೆಯುತ್ತಿದೆ. ಸಹಕಾರ ಇಲಾಖೆಯ 64ರಂತೆ ತನಿಖೆ ಆಗಬೇಕೆಂದು ನಾವು ಒತ್ತಾಯಿಸಿದ್ದೇವೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು ಎನ್ನುವುದು ನಮ್ಮ ಬೇಡಿಕೆಯೂ ಆಗಿದೆ. ಈಗಾಗಲೇ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರಾಜೀನಾಮೆ ನೀಡಿದ್ದಾರೆ. ಆದರೆ ಇತ್ತೀಚೆಗೆ ಪ್ರತಿಭಟನೆ ನಡೆದಿರುವುದು ಸಂಪೂರ್ಣವಾಗಿ ರಾಜಕೀಯ ಉದ್ದೇಶಪೂರಿತವಾಗಿದೆ. ಡಿಸೆಂಬರ್ 29ರಂದು ಸಂಘದ ಚುನಾವಣೆ ನಡೆಯಲಿದ್ದು ಅದನ್ನೇ ಗಮನದಲ್ಲಿ ಇಟ್ಟಕೊಂಡು ಪ್ರತಿಭಟನೆ ನಡೆಸಿದ್ದಾರೆ. ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು. ಸಂಘದಲ್ಲಿ 9 ಮಂದಿ ಬಿಜೆಪಿ ಬೆಂಬಲಿತ ನಿರ್ದೇಶಕರಿದ್ದು, 4 ಮಂದಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿದ್ದಾರೆ. ಚುನಾವಣೆಗೆ ಕೆಲವೇ ದಿನಗಳು ಇರುವಾಗ ರಾಜೀನಾಮೆ ನೀಡಿದ್ದಾರೆ. ಇಲ್ಲಿಯ ತನಕ ಸೌಹಾರ್ದಯುತವಾಗಿ ಕಾರ್ಯನಿರ್ವಹಿಸುತ್ತಿದ್ದೇವು. ಯಾವ ನಿರ್ದೇಶಕರು ಕೂಡಾ ಇದರಲ್ಲಿ ಶಾಮೀಲಾಗಿಲ್ಲ ಎಂದರು.

ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ. ಕಳೆದ 40 ವರ್ಷಗಳಿಂದ ಉತ್ತಮ ಆಡಳಿತವನ್ನು ಸಂಸ್ಥೆ ನೀಡುತ್ತಾ ಬಂದಿದೆ. ಮುಂದೆಯೂ ಕೂಡಾ ಸದಸ್ಯರಿಗೆ ಉತ್ತಮವಾದ ಸೇವೆ ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ರತ್ನಾಕರ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಬಸವ ಮರಕಾಲ, ಕಾವೇರಿ ಪ್ರಸಾದ್ ಉಪಸ್ಥಿತರಿದ್ದರು,

Click Here

LEAVE A REPLY

Please enter your comment!
Please enter your name here