ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕುಂದೇಶ್ವರ ದೇವಸ್ಥಾನದ ದೀಪೋತ್ಸವ ಪ್ರಯುಕ್ತ ಇದೇ ಬರುವ ನವಂಬರ್ 30 ಹಾಗೂ ಡಿಸೆಂಬರ್ 1 ರಂದು ಸಂಜೆ 6 ಗಂಟೆ ನಂತರ ಕುಂದಾಪುರದ ಶಾಸ್ತ್ರಿ ವೃತ್ತದಿಂದ ಹಳೆ ಬಸ್ಸು ನಿಲ್ದಾಣದ ತನಕ ಯಾವುದೇ ವಾಹನಗಳಿಗೆ ಪೇಟೆಯ ಒಳಭಾಗದಲ್ಲಿ ಪ್ರವೇಶ ವಿರುವುದಿಲ್ಲ.
ದೀಪೋತ್ಸವದ ಕಾರ್ಯಕ್ರಮಕ್ಕೆ ಆಗಮಿಸುವ ದ್ವಿಚಕ್ರ ವಾಹನದ ಸವಾರರು ತಮ್ಮ ಬೈಕನ್ನು ಶಾಸ್ತ್ರಿ ವೃತ್ತದ ಸಮೀಪವಿರುವ NH ನ ಅಂಡರ್ ಪಾಸ್ ಮೇಲ್ ಸೇತುವೆಯ ಕೆಳಬಾಗದ ಪಾರ್ಕಿಂಗ್ ನಲ್ಲಿ ನಿಲ್ಲಿಸತಕ್ಕದ್ದು.
ಲಘು ಹಾಗೂ ಘನ ವಾಹನಗಳಿಗೆ, ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ ಎಂದು ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.