ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶಂಕರನಾರಾಯಣ ಹಾಲಾಡಿ ರಾಜ್ಯ ಹೆದ್ದಾರಿಯ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ೧೦ ಕೋಟಿ ರೂ.,ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯು ಶಂಕರನಾರಾಯಣದಲ್ಲಿ ಜರಗಿತು.
ಶಾಸಕ ಗುರುರಾಜ ಗಂಟಿಹೊಳೆ ಅವರು ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ರಾಜ್ಯ ಹೆದ್ದಾರಿಯು ಸಂಪೂರ್ಣ ಹಾಳಾಗಿವೆ. ಕಾರ್ಯಕರ್ತರ ಹಾಗೂ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಹೆದ್ದಾರಿ ಅಭಿವೃದ್ಧಿಗೆ ಗುದ್ದಲಿ ಪೂಜೆ ಮಾಡಲಾಗಿದೆ. ತನ್ನ ಶಾಸಕ ಅವಧಿಯಲ್ಲಿ ಪ್ರಥಮ ಅನುಧಾನವಾಗಿದ್ದು, ಇದ್ದನ್ನು ಶಂಕರನಾರಾಯಣ ಹಾಲಾಡಿ ಹೆದ್ದಾರಿ ಅಭಿವೃದ್ಧಿಗೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಂಕರನಾರಾಯಣ ಗ್ರಾ.ಪಂ. ಅಧ್ಯಕ್ಷ ಉಮೇಶ ಶೆಟ್ಟಿ ಕಲ್ಗದ್ದೆ, ಸದಸ್ಯರಾದ ರವಿ ಕುಲಾಲ, ಲತಾ, ಪೂರ್ಣಿಮ, ಕೃಷ್ಣಮೂರ್ತಿ ಡಿ.ಶೇಟ್, ಸುದೀಪ ಶೆಟ್ಟಿ ಹೆಬ್ಬಾಡಿ, ಗುರುದತ್ ಶೇಟ್, ಮುಖಂಡರಾದ ಡಾ| ಕೆ. ಸ್ಚಿದಾನಂದ ವೈದ್ಯ, ಪಾಂಡುರಂಗ ನಾಯ್ಕ, ವಿಜಯ ಯಡಮಕ್ಕಿ, ಚಂದ್ರಹಾಸ ಹೆಗ್ಡೆ, ಶೇಖರ ಕುಲಾಲ ಸಿದ್ದಾಪುರ, ಗೋಪಾಲ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.