ತ್ರಾಸಿ :ಡೊನ್ ಬೋಸ್ಕೊ ಶಾಲೆಯ ವಾರ್ಷಿಕೋತ್ಸವ ಹಾಗೂ ರಜತ ಮಹೋತ್ಸವಕ್ಕೆ ಚಾಲನೆ

0
334

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಗ್ರಾಮೀಣ ಪರಿಸರದಲ್ಲಿ ಅವಕಾಶ ವಂಚಿತ ಯುವ ಜನರಿಗಾಗಿ ತಾಂತ್ರಿಕ ಶಿಕ್ಷಣದೊಂದಿಗೆ ಆರಂಭಗೊಂಡ ಸಂಸ್ಥೆಯು ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಾಲ ಆಲದ ಮರವಾಗಿ ಬೆಳೆದು ಗ್ರಾಮೀಣ ಪ್ರದೇಶದಲ್ಲಿ ವರವಾಗಿ ಪರಿಣಮಿಸಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರು ರೆ.ಫಾ.ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.

ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದಲ್ಲಿರುವ ಡೊನ್ ಬೋಸ್ಕೊ ಶಾಲೆಯ ವಾರ್ಷಿಕೋತ್ಸವ ಹಾಗೂ ರಜತ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪ ವರಿಷ್ಠ ರೆ.ಫಾ. ಬಾಂಜೆಲಾವ್ ತೆಶಿಯೇರಾ ಗೋವಾ ಮಾತನಾಡಿ, ಸಂತ ಡೋನ್ ಬೋಸ್ಕೊ ಕನಸು ನನಸಾಗಿರುವ ನಿಟ್ಟಿನಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆ ಜನಮನದಲ್ಲಿ ಸದಾ ನೆಲೆ ನಿಲ್ಲಲಿ ಎಂದು ಹಾರೈಸಿದರು.

Click Here

Click Here

ಸಂಸ್ಥೆಯ ಸ್ಥಾಪಕ ರೆ.ಫಾ. ಮೈಕಲ್ ಮಸ್ಕರೇನ್ಹಸ್ ಹಾಗೂ ಕುಂದಾಪುರ ವಲಯದ ಶ್ರೇಷ್ಠ ಧರ್ಮಗುರು ರೆ.ಫಾ.ಪೌಲ್ ರೇಗೋ ಶುಭಾಶಂಸನೆಗೈದರು. ರಜತ ಮಹೋತ್ಸವದ ಲೋಗೋವನ್ನು ಅನಾವರಣಗೊಳಿಸಿ ರಜತ ಮಹೋತ್ಸವ ಆಚರಣೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪಕ ರೆ.ಫಾ ಮೈಕಲ್ ಮಸ್ಕರೇನ್ಹಸ್ ಅವರನ್ನು ಸನ್ಮಾನಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮ್ಯಾಕ್ಸಿಮ್ ಡಿಸೋಜ, ಉತ್ತಮ ಗುಣಮಟ್ಟದ ಶಿಕ್ಷಣ, ಇಂಗ್ಲಿಷ್ ಸಂವಹನದಲ್ಲಿ ಪ್ರವೀಣತೆ, ಸಹ ಪಠ್ಯ ಚಟುವಟಿಕೆಗಳ ಮುಖಾಂತರ ವ್ಯಕ್ತಿತ್ವ ವಿಕಸನ, ಲೀಡ್ ಸ್ಕೂಲ್ ಸಹಯೋಗದಿಂದ ಕಲಿಕೆಯಲ್ಲಿ ವಿದ್ಯಾರ್ಥಿಗಳ ಆಲೋಚನಾ ಶಕ್ತಿ ಹಾಗೂ ಸೃಜನಶೀಲತೆಯ ಬೆಳವಣಿಗೆ, ಆಧುನಿಕ ತಂತ್ರಜ್ಞಾನದ ಕೋಡಿಂಗ್ ಜೊತೆ ಕಂಪ್ಯೂಟರ್ ತರಬೇತಿ, ಸ್ಟೆಮ್ ಮತ್ತು ರೊಬೊಟಿಕ್ಸ್ ಶಿಕ್ಷಣ ನೀಡಲಾಗುತ್ತಿದ್ದು, ವಿಜ್ಞಾನ ವಿಷಯಗಳ ಪತ್ಯೇಕ ಪ್ರಯೋಗಾಲಯಗಳು, ಅಂತರ್‌ಜಾಲ ಸಂಪರ್ಕವುಳ್ಳ ಹವಾನಿಯಂತ್ರಿತ ಗಣಕಯಂತ್ರ ಪ್ರಯೋಗಾಲಯ, ವಿಶಾಲವಾದ ಹಸಿರು ಹಾಸಿಗೆಯ ಫುಟ್‌ಬಾಲ್ ಮೈದಾನ ಹಾಗೂ ಒಳಾಂಗಣ ಕ್ರೀಡಾ ಸೌಲಭ್ಯ ಹೊಂದಿದೆ ಎಂದರು.

ಉಪಪ್ರಾಂಶುಪಾಲ ಬೈಸ್ ರೊಡ್ರಿಗಸ್, ಶಿಕ್ಷಕ-ರಕ್ಷಕ ಸಮಿತಿ ಅಧ್ಯಕ್ಷ ಸಂತೋಷ ಪಾಯಸ್, ಆಶಾ ಕರ್ವಾಲ್ಲೊ, ಮಂಗಳೂರು ಚರ್ಚಿನ ಧರ್ಮಗುರು ರೆ.ಫಾ. ಆನ್ಸಿಯೊ, ವಿದ್ಯಾರ್ಥಿ ನಾಯಕರಾದ ಡೆರಿಕ್, ಅನುಶ್ರೀ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ಆಡಳಿತಾಧಿಕಾರಿ ರೆ.ಫಾ.ರೋಶನ್ ಸ್ವಾಗತಿಸಿದರು. ಶಿಕ್ಷಕಿಯರಾದ ಸುಜಾತಾ ಮತ್ತು ರೀನಾ ಬಹುಮಾನ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.

Click Here

LEAVE A REPLY

Please enter your comment!
Please enter your name here