ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಖಂಬದಕೋಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಂಬದಕೋಣೆ ನಾರಾಯಣ ಶೆಟ್ಟಿ ಇವರ ಮನೆಗೆ “ಸ್ವಾತಂತ್ರ್ಯ ಹೋರಾಟಗಾರರ ಮನೆ” ನಾಮ ಫಲಕ ಅನಾವರಣ
ಸ್ವರಾಜ್ಯ ೭೫ ತಂಡದ 34ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾರ್ಯಕ್ರಮಕ್ಕೆ ಜೊತೆಯಾದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರಕಾರಿ ಪ್ರಥಮ ದಜೆ೯ ಕಾಲೇಜು ಬೈಂದೂರು, ಹಸ್ತ ಚಿತ್ರ ಫೌಂಡೇಶನ್ ರಿಂದ ವಕ್ವಾಡಿ, ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ಉಸಿರು ಕೋಟ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಬೈಂದೂರು ತಾಲೂಕು ಘಟಕ, ಸಮೃದ್ಥ ಜನಸೇವಾ ಚಾರಿಟೇಬಲ್ ಟ್ರಸ್ಟ್ ರಿ ಬೈಂದೂರು “ಸ್ವರಾಜ್ಯ ೭೫ ತಂಡದೊಂದಿಗೆ ಯಶಸ್ವಿಗೊಳಿಸಲಾಯಿತು.
ನವೀನ್ ಹೆಚ್ ಜೆ. ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಣ್ಯರು ಪುಷ್ಪಾರ್ಚನೆ ಗೈದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ ರಾಜ್ಯ ಸಮಿತಿ ಸದಸ್ಯರು ಎಸ್.ವೈ. ನಿಮ೯ಲಾ ನಾಮಫಲಕ ಅನಾವರಣ ಮಾಡಿದರು.
ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಯ ಕೊಡುಗೆಯೊಂದಿಗೆ ಖಂಬದಕೋಣೆ ನಾರಾಯಣ ಶೆಟ್ಟಿ ಸ್ವಾತಂತ್ರ್ಯ ಹೋರಾಟದ ವಿಚಾರವನ್ನು ಸುಜಯ್ ಶೆಟ್ಟಿ ಹಳ್ನಾಡು ಪ್ರಸ್ತುತಪಡಿಸಿದರು. ಗಣ್ಯರಾಗಿ ಚಂದು ಕುಲಾಲ್, ಲಕ್ಷ್ಮೀ ಶೆಡ್ತಿ ಹಂಚಿಕೊಂಡರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ದೇವಾಡಿಗ ಹೊಳ್ಳರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀಪತಿ ಆಚರ್ಯ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳು ,ಕುಟುಂಬಸ್ಥರು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ವಿಚಾರವನ್ನು ಕಾರ್ಯಕ್ರಮದ ಸಂಚಾಲಕರಾದ ( ಸ್ವರಾಜ್ಯ 75) ಪ್ರದೀಪ ಕುಮಾರ್ ಬಸ್ರೂರು ವಿಚಾರ ರೂಪುರೇಷ ತಿಳಿಸಿದರು. ನಿರೂಪಣೆಯನ್ನು ಶ್ವೇತಾ ಬಂಕೇಶ್ವರ, ಧನ್ಯವಾದವನ್ನು ಆಶಿತಾ ತಗ್ಗಸೆ೯ ನಡೆಸಿದರು..