ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಉಪ್ಪುಂದದ ಯುವಮಾನಸ ಗಾಣಿಗ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಮಂಜುನಾಥ್ ಶಿಕಾರಿಪುರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಕಚೇರಿಯಲ್ಲಿ ನಡೆದ ಆಯ್ಕೆ ಸಭೆಯಲ್ಲಿ ಹಾಲಿ ಅಧ್ಯಕ್ಷರ ಆಶಯದಂತೆ ಹಾಗೂ ಎಲ್ಲಾ ಟ್ರಸ್ಟಿಗಳ ಒಪ್ಪಿಗೆಯಂತೆ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾರ್ಯದರ್ಶಿಯಾಗಿ ಸವಿತಾ ದಿನೇಶ ಬೈಂದೂರು, ಜೊತೆ ಕಾರ್ಯದರ್ಶಿಯಾಗಿ ಸುಬ್ರಮಣ್ಯ. ಜೆ ಉಪ್ಪುಂದ ಹಾಗೂ ಕೋಶಾಧಿಕಾರಿಯಾಗಿ ಅನಂತ ಗಾಣಿಗ ಉಪ್ಪುಂದ ಆಯ್ಕೆಯಾದರು. ಸಾಧನ ಅಕಾಡೆಮಿಯ ಯಶಸ್ವಿಯ ರೂವಾರಿಯಾಗಿರುವ ಮಂಜುನಾಥ್ ಶಿಕಾರಿಪುರ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಯುವ ಮಾನಸ ಗಾಣಿಗ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ಟ ಕಳೆದ 3 ವರ್ಷಗಳ ಹಿಂದೆ ಎಚ್ ಸುಬ್ಬಯ್ಯ ಶಿವಮೊಗ್ಗರವರು ತಮ್ಮ ಹುಟ್ಟೂರಾದ ಉಪ್ಪುಂದದಲ್ಲಿ ಆರಂಭಿಸಿದರು. ಬಳಿಕ ಸಂಸ್ಥೆಯು ಗಾಣಿಗ ಸಮುದಾಯದ ಮಕ್ಕಳ ವಿದ್ಯಾಭ್ಯಾಸದ ನೆರವಿಗೆ ಮತ್ತು ಸರ್ಕಾರದ ಉನ್ನತ ಮಟ್ಟದ ಹುದ್ದೆಗಿಟ್ಟಿಸಲು ಅವಶ್ಯವಾದ ತರಭೇತಿಯನ್ನು ಕಾರ್ಯಾಗಾರಗಳನ್ನು ನಡೆಸುತ್ತಾ ಬಂದಿದೆ. ಟ್ರಸ್ಟ್ ನ ಆಡಳಿತ ಮಂಡಳಿಗೆ ನಿವೃತ್ತ ಕೆನರಾ ಬ್ಯಾಂಕ್ ಅಧಿಕಾರಿ ರತ್ನಾಕರ ಗಾಣಿಗ, ರಾಜು ಹುಳವಾಡಿ ಹಾಗೂ ಡಾ. ಸುಜಯ್ ಶಿವಮೊಗ್ಗರನ್ನು ನೂತನ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು.