ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದೇಶದಲ್ಲಿನ ನಿರುದ್ಯೋಗದ ನೂತನ ಕಾರ್ಮಿಕ ಸಂಹಿತೆ, ಮೂರು ಕೃಷಿ ಕಾಯ್ದೆ ವಿರುದ್ಧ ಸಿಪಿಎಂ ದೇಶವ್ಯಾಪಿ ನಡೆಸುತ್ತಿರುವ ಹೋರಾಟವನ್ನು ಎಲ್ಲಾ ಧರ್ಮಗಳ ಜನರನ್ನು ಒಂದುಗೂಡಿಸಿ ಸೌಹಾರ್ಧತೆಯ ಮೂಲಕವೇ ಸಿಪಿಎಂ ಉತ್ತರ ನೀಡಲಿದ್ದೇವೆ. ಜನರ ನೈಜ ಸಮಸ್ಯೆಗಳನ್ನು ಮುಚ್ಚಿಡಲು ಬಿಜೆಪಿ ನೇತೃತ್ವದ ಸಂಘಪರಿವಾರ ಕೋಮುವಾದ ಮುನ್ನಲೆಗೆ ತರುತ್ತಿದೆ ಧಾರ್ಮಿಕತೆಯೇ ಬಂಡವಾಳ ಮಾಡಿಕೊಂಡು ಹಿಂದೂ ಯುವಕರನ್ನು ಕೋಮುವಾದಿಯಾಗಿಸಿ ಕ್ರಿಮಿನಲ್ ಗಳಾಗಿ ಮಾಡಲಾಗುತ್ತಿದೆ ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ ಹೇಳಿದರು.
ಕುಂದಾಪುರದ ನಾಡದಲ್ಲಿ ಸೋಮವಾರ ನಡೆದ ಸಿಪಿಎಂ ಪಕ್ಷದ ಉಡುಪಿ ಜಿಲ್ಲಾ 8ನೇ ಸಮ್ಮೇಳನದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬಹಿರಂಗ ಸಭೆಯ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿದ್ದ ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ ಪ್ರಕಾಶ್ ಕೆ ಮಾತನಾಡಿ; ಕಸ್ತೂರಿ ರಂಗನ್ ವರದಿ ಬಗ್ಗೆ ಬಿಜೆಪಿ ದಂದ್ವ ನಿಲುವು ಅನುಸರಿಸಿ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಕಾಡಿನಂಚಿನ ಜನರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಬಿಜೆಪಿ ಜನಪ್ರತಿನಿಧಿಗಳು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಆಗ್ರಹಿಸಿದರು. ಕಸ್ತೂರಿ ರಂಗನ ವರದಿಯನ್ನು ರಾಜ್ಯ ಸರಕಾರ ಈಗಾಗಲೇ ತಿರಸ್ಕರಿಸಿದೆ ಆದರೆ ಕೇಂದ್ರ ಸರ್ಕಾರ ರಾಜ್ಯಗಳ ತಿರಸ್ಕಾರದ ನಡುವೆಯೂ ವರದಿ ಜಾರಿಗೆಗೆ ಮುಂದಾಗಿದೆ. ಇದು ಅರಣ್ಯ ಉಳಿಸುವ ನಿಟ್ಟಿನಲ್ಲಿ ಇರದೆ ಅಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡುವ ಹುನ್ನಾರ ಅಡಗಿದೆ. ಅರಣ್ಯದ ಆದಿವಾಸಿಗಳಿಗೆ ಭೂಮಿ ಹಕ್ಕು ನೀಡಲು ಸರಕಾರ 75 ವರ್ಷದ ದಾಖಲೆ ಕೇಳುತ್ತದೆ. ನಮ್ಮ ಪಕ್ಷ ದಾಖಲೆ ಕೇಳುವ ವರ್ಷಗಳ ಅವಧಿ ಕಡಿಮೆ ಮಾಡಲು ಹೋರಾಟ ನಡೆಸುತ್ತಾ ಬರುತಿದೆ. ಅಲ್ಲದೆ ಸಿಪಿಎಂ ಕಾಡಂಚಿನಲ್ಲಿ ವಾಸಿಸುವ ಆದಿವಾಸಿ ಇತರೆ ಜನ ವಿಭಾಗಗಳನ್ನು ಒಕ್ಕಲೆಬ್ಬಿಸು ನಿರ್ಧಾರ ವಿರೋಧಿಸುತ್ತದೆ ಎಂದರು.
ಇಂದು ಕರ್ನಾಟಕದ ರಾಜ್ಯದಲ್ಲಿ ಆಡಳಿತದಲ್ಲಿ ಇರುವ ಕಾಂಗ್ರೆಸ್ ಸರಕಾರ ಮೋದಿ ಸರಕಾರ ಬಿಪಿಎಲ್ ರೇಷನ್ ಕಾರ್ಡ್ ಕುರಿತು ಮಾಡಿರುವ ನಿಯಮಗಳನ್ನು ಇವರು ಜಾರಿಗೆ ಮಾಡಿ ಇಂದು ರಾಜ್ಯದಲ್ಲಿ ಜನರನ್ನು ಕಷ್ಟಕ್ಕೆ ದೂಡುತ್ತಿದ್ದಾರೆ. ಅದರ ಹೋರಾಟದ ನಾಟಕದಲ್ಲಿ ರಾಜ್ಯ ಬಿಜೆಪಿ ಸೇರಿಕೊಂಡಿದೆ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿ ಮರುಪರಿಶೀಲನೆ ಮಾಡಬೇಕು, ಅಪಾಯವಿಲ್ಲದ ಸ್ಥಳಗಳಲ್ಲಿ ಕೆಂಪು ಕಲ್ಲು ಗಣಿಗಾರಿಕೆಗೆ ಕಾನೂನು ಬದ್ಧ ಅನುಮತಿ ನೀಡಬೇಕು, ನಾಡ ಬಹುಗ್ರಾಮ ಕುಡಿಯುವ ನೀರಿನ ವೈಪಲ್ಯ ಖಂಡಿಸಿ,ಸರಿಪಡಿಸಲು ಆಗ್ರಹಿಸಿ, ದಲಿತರ ಮೇಲಿನ ದೌರ್ಜನ್ಯ ತಡೆಗಾಗಿ, ಕೋಮು ಸೌಹಾರ್ಧತೆಗಾಗಿ,ಹೆಗ್ಗುಂಜೆಯಿಂದ ಕುಂದಾಪುರ ವರೆಗಿನ ವಿದ್ಯುತ್ ಮಾರ್ಗದ ವಿರುದ್ದ, ಮಹಿಳೆಯರ ಮೇಲೆ ಮೈಕ್ರೋಪೈನಾನ್ಸ್ ನಡೆಸುತ್ತಿರುವ ದೌರ್ಜನ್ಯ ವಿರುಧ್ಧ, ಸೇನಾ ಪುರದಲ್ಲಿ ಎಲ್ಲಾ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ಸರಕಾರಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು, ಕುಂದಾಪುರ ಗಂಗೊಳ್ಳಿ ಸಂಪರ್ಕ ಸೇತುವೆ ಮೊದಲಾದ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಇದೇ ಸಂದರ್ಭ ನೂತನ ಜಿಲ್ಲಾ ಸಮಿತಿ ಆಯ್ಕೆ 16 ಮಂದಿ ನೂತನ ಜಿಲ್ಲಾ ಸಮಿತಿಯನ್ನು ಸಮ್ಮೇಳನ ಆಯ್ಕೆ ಮಾಡಿತು. ಜಿಲ್ಲಾ ಕಾರ್ಯದರ್ಶಿಯಾಗಿ ಸುರೇಶ್ ಕಲ್ಲಾಗರ ಅವರನ್ನು ಸಮಿತಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್ ನರಸಿಂಹ, ರಾಜೀವ ಪಡುಕೋಣೆ, ನಾಗರತ್ನ ನಾಡ, ಶಶಿಧರ ಗೊಲ್ಲ ಉಪಸ್ಥಿತರಿದ್ದರು. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಸಾವಿರಾರು ಮಂದಿ ಕಾರ್ಮಿಕರು, ಕೂಲಿಕಾರರು ನಾಡ ಪಡುಕೋಣೆಯಿಂದ ನಾಡ ಗುಡ್ಡಿಯಂಗಡಿ ವರೆಗೆ ಬೃಹತ್ ಮೆರವಣಿಗೆ ನಡೆಸಿದರು. ಡೋಲು ತಂಡ, ಚಂಡೆ ತಂಡಗಳು ಮೆರವಣಿಗೆಗೆ ಮೆರಗು ನೀಡಿತು. ಸ್ವಾಗತ ಸಮಿತಿ ಅಧ್ಯಕ್ಷ ಪಿಲಿಫ್ ಡಿ ಸಿಲ್ವಾ ಸ್ವಾಗತಿಸಿದರು. ಶ್ರೀಧರ ನಾಡ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ವಿ ವಂದಿಸಿದರು.