ಕುಂದಾಪುರ :ಕೆಪಿಎಸ್ ಕೋಟೇಶ್ವರದ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ

0
525

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತೆಯ ಸಚಿವಾಲಯ ಇಲಾಖೆಯ ಉಪಕ್ರಮದ ಭಾಗವಾಗಿ ಸಮಗ್ರ ಶಿಕ್ಷಣ ಕರ್ನಾಟಕ ಇವರು ಶಿಕ್ಷಣದಲ್ಲಿ ಕಲೆಯನ್ನು ಉತ್ತೇಜಿಸಿ ಕಲಾತ್ಮಾಕತೆಯನ್ನು ಪೋಷಿಸುವ ಮತ್ತು ಪ್ರದರ್ಶಿಸುವ ಮೂಲಕ ಪ್ರೌಢಶಾಲಾ ಮಕ್ಕಳಲ್ಲಿರುವ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿದ ಕಲೋತ್ಸವ 2024-25 ರಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಕೋಟೇಶ್ವರ ಇಲ್ಲಿನ 9ನೇ ತರಗತಿ ವಿದ್ಯಾರ್ಥಿಗಳಾದ ಮಾನ್ವಿ ಮತ್ತು ಸಂಜನಾ ಸಾಂಪ್ರದಾಯಿಕ ಕಥೆ ಹೇಳುವ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಹಾಗೂ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ ಅಲ್ಲದೆ ಗಾಯನ ಸಂಗೀತ ವಿಭಾಗದ ಜನಪದ ಬುಡಕಟ್ಟು ವಿಭಾಗದಲ್ಲಿ ವೈಷ್ಣವಿ ಮತ್ತು ತಂಡ ಜಿಲ್ಲಾ ಮಟ್ಟದಲ್ಲಿ ಚತುರ್ಥ ಸ್ಥಾನ ಪಡೆದಿರುತ್ತಾರೆ.

Click Here

ಸಂಸ್ಥೆಯ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ಮತ್ತು ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳ ಈ ಸಾಧನೆಗೆ ಶುಭ ಹಾರೈಸಿದ್ದಾರೆ

LEAVE A REPLY

Please enter your comment!
Please enter your name here