ಬಾರಕೂರು :ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

0
187

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು ಬಾರಕೂರು ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವ ಡಿ.15ರಂದು ಆರಂಭಗೊಂಡಿತು. ಡಿ.19ರ ತನಕ ಜಾತ್ರಾ ಮಹೋತ್ಸವ ನಡೆಯಲಿದೆ.

ಡಿ.15ರಂದು ಬೆಳಿಗ್ಗೆ 108 ಕಾಯಿ ಗಣಪತಿ ಹೋಮ, ನವಕ ಪ್ರಧಾನ ಕಲಶಾಭಿಷೇಕ, ಮಧ್ಯಾಹ್ನ ಪೂರ್ಣಾಹುತಿ, ರಾತ್ರಿ 7 ಗಂಟೆಗೆ ಗುರುಮಠದ ಮೂಲಮನೆಯಲ್ಲಿ ತುಳಸಿ ಪೂಜೆ, ರಾತ್ರಿ 10 ಗಂಟೆಗೆ ಕೆಂಡಸೇವೆ, ರಾತ್ರಿ 11.30ಕ್ಕೆ ರಂಗಪೂಜೆ, ತುಳಸಿ ಪೂಜೆ ನಡೆಯಿತು.

Click Here

Click Here

ಡಿ.16 ಸೋಮವಾರ ಪೂರ್ವಾಹ್ನ 9ಕ್ಕೆ ಮಹಾಮಂಗಳಾರತಿ, 10 ಗಂಟೆಗೆ ಪರಿವಾರ ದೇವರುಗಳ ನೃತ್ಯಸೇವೆ, 12 ಗಂಟೆಗೆ ತುಲಾಭಾರಾದಿ ಹರಕೆಗಳು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಅಪರಾಹ್ನ ಗಂಟೆ 3ಕ್ಕೆ ಮಹಾಮಂಗಳಾರತಿ, ಮಹಾಬಲಿ ಪೂಜೆ, ಸಂಜೆ 5 ಗಂಟೆಗೆ ಸೆಡಿ ಪೂಜೆ, ಬೆಳಗಿನ ಜಾವ 5 ಗಂಟೆಗೆ ತೆಪ್ಪೋತ್ಸವ (ಹೊಳೆಯಾನ), ಕಟ್ಟೆಪೂಜೆ ನಡೆದವು.

ಡಿ.17ರಂದು ಮಂಗಳವಾರ ಪೂರ್ವಾಹ್ನ 9ಕ್ಕೆ ಮಹಾಮಂಗಳಾರತಿ, 10ಕ್ಕೆ ಪರಿವಾರ ದೇವರುಗಳ ನೃತ್ಯಸೇವೆ, ಗುರುಪೀಠದಲ್ಲಿ ದೀಪಾರಾಧಾನೆ, 12ಕ್ಕೆ ತುಲಾಭಾರಾದಿ ಹರಕೆಗಳು, ಅಪರಾಹ್ನ ಗಂಟೆ 3ರಿಂದ ಮುಳ್ಳುಹಾವಿಗೆ ಪಾದುಕೆ ಪೂಜೆ, ಬೆನಗಲ್ಲು ಪೂಜೆ, ಯೋಗಿ ಪುರುಷರ ದರ್ಶನ, ಬೊಬ್ಬರ್ಯ ದೇವರ ದರ್ಶನ, ಅಜ್ಜಮ್ಮ ದೇವರಿಗೆ ಹೂವು ಅರ್ಪಣೆ ನಡೆಯಲಿದೆ.

ಡಿ.18 ಬುಧವಾರ ಪೂರ್ವಾಹ್ನ 11 ಕ್ಕೆ ನಾಗದೇವರ ದರ್ಶನ, 12 ಗಂಟೆಗೆ ಮಹಾಪೂಜೆ, ಹಸಲ ದೈ ಮತ್ತು ಕೋಳಿಯಾರ ದೈವದ ಪೂಜೆ, ರಾತ್ರಿ 9ಕ್ಕೆ ಮಲೆಸಾವಿರ ಮತ್ತು ಪರಿವಾರ ದೈವಗಳ ಕೋಲ ಪ್ರಾರಂಭ, ಡಿ.19ರಂದು ಗುರುವಾರ ಪ್ರಾತಃಕಾಲ 6 ಗಂಟೆಗೆ ಮಲೆಸಾವಿರ ದೈವ ದರ್ಶನ, 8 ಗಂಟೆಗೆ ಹಾಲಾವಳಿ ನಡೆಯಲಿದೆ.

ಡಿ.16 ಸೋಮವಾರ ಸಂಜೆ 6.30ರಿಂದ ಸಾಂಸ್ಕಂತಿಕ ವೈವಿಧ್ಯ- ಮೊಗವೀರ ಯುವಕ ಸಂಘ ಬೆಣ್ಣೆಕುದ್ರು ಬಾರ್ಕೂರು ಇವರಿಂದ. ಡಿ.17 ಮಂಗಳವಾರ ಸಂಜೆ 6.30ರಿಂದ ಸಾಂಸ್ಕಂತಿಕ ವ್ಯವಿಧ್ಯ- ಮೊಗವೀರ ಮಹಿಳಾ ಸಂಘ ಬೆಣ್ಣೆಕುದ್ರು ಬಾರ್ಕೂರು ಇವರಿಂದ ನಡೆಯಲಿದೆ.

ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಅಂಬಲಪಾಡಿ ಇದರ ಪ್ರವರ್ತಕ ಡಾ.ಜಿ.ಶಂಕರ್‌, ಉದ್ಯಮಿ ಆನಂದ್ ಸಿ.ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here