ಕೋಟ ಪಂಚವರ್ಣದಿಂದ ತುಳಸಿ ಗೌಡರಿಗೆ ನುಡಿನಮನ
ಕುಂದಾಪುರ: ಪರಿಸರದ ಬಗ್ಗೆ ಅಪಾರವಾದ ಕಾಳಜಿ, ಶಿಕ್ಷಣ ಪಡೆಯದಿದ್ದರೂ ಅವರ ಪ್ರಕೃತಿ ಪ್ರೇಮ ವಿಶ್ವಮಟ್ಟದಲ್ಲಿ ಪಸರಿಸಿಕೊಂಡಿದೆ ಎಂದು ಖ್ಯಾತ ಪರಿಸರಪ್ರೇಮಿ ಉಡುಪಿ ರವಿರಾಜ್ ಹೇಳಿದರು.
ಮಂಗಳವಾರ ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಸೋಮವಾರ ಇಹಲೋಕ ತೆಜಿಸಿದ ವೃಕ್ಷಮಾತೆ ತುಳಸಿ ಗೌಡ ಇವರ ಸ್ಮರಣಾರ್ಥ ತುಳಸಿಯಮ್ಮನಿಗೊಂದು ನುಡಿನಮನ ಕಾಯಕ್ರಮದಲ್ಲಿ ನುಡಿನಮನಗೈದು ಮಾತನಾಡಿ ತುಳಸಿ ಅಮ್ಮನಿಗಿದ್ದ ಪರಿಸರ ಕಾಳಜಿ ಮುಂದಿನ ತಲೆಮಾರಿಗೆ ಮಾದರಿಯಾಗಿದೆ. ತನ್ನ ಜೀವಿತ ಅವಧಿಯಲ್ಲಿ ಅವರು ನೆಟ್ಟು ಪೋಷಿಸಿದ ಗಿಡಗಳು ಹೆಮ್ಮರವಾಗಿ ಬೆಳೆದು ನಿಂತಿದೆ. ಇದರಿಂದ ನಮ್ಮ ಉಸಿರು ಉಳಿದುಕೊಂಡಿದೆ. ಪ್ರತಿಯೊಬ್ಬರು ಗಿಡ ನೆಟ್ಟು ಅವರಂತೆ ಜೀವಿಸೋಣ ಪಂಚವರ್ಣದ ಪ್ರಕೃತಿ ಮಾತೆಯ ಆರಾಧನೆಯ ಕಾರ್ಯಕ್ರಮ ತುಳಸಿ ಅಮ್ಮನಂತೆ ಕಂಗೊಳಿಸಲಿ ಎಂದರು.
ಸಭೆಯಲ್ಲಿ ಗಣ್ಯರು ತುಳಸಿ ಗೌಡರ ಭಾವಚಿತ್ರಕ್ಕೆ ಪುಷ್ಭ ನಮನಗೈದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಹಂದಾಡಿ ಗ್ರಾಮಪಂಚಾಯತ್ ಕಾರ್ಯದರ್ಶಿ ಪೂರ್ಣಿಮಾ ಅಧಿಕಾರಿ, ಕರ್ಣಾಟಕ ಬ್ಯಾಂಕ್ ನಿವೃತ್ತ ಪ್ರಭಂಧಕ ಕೋಡಿ ಚಂದ್ರಶೇಖರ್ ನಾವಡ, ಕೋಟ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಭಾವತಿ ಹೊಳ್ಳ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.
ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಪಂಚವರ್ಣದ ಸದಸ್ಯ ರವೀಂದ್ರ ಕೋಟ ವಂದಿಸಿದರು.