ಕುಂದಾಪುರ :ಜಮಿಯತುಲ್ ಮುಸ್ಲಿಮೀನ್ ಹಾಗೂ ಗ್ರೂಪ್ ಚಾರಿಟೇಬಲ್ ಸೆಂಟರ್ ವತಿಯಿಂದ ಎರಡು ಮನೆಗಳ ಹಸ್ತಾಂತರ

0
117

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಜಮಿಯತುಲ್ ಮುಸ್ಲಿಮೀನ್ ಕುಂದಾಪುರ ಹಾಗೂ ಕುಂದಾಪುರ ಗ್ರೂಪ್ ಚಾರಿಟೇಬಲ್ ಸೆಂಟರ್ ಇವರ ಸಹಯೋಗದಲ್ಲಿ ದಾನಿಗಳಿಂದ ನೆರವಿನಿಂದ ಸುಮಾರು 10ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಎರಡು ಮನೆಗಳನ್ನು ಬಡತನದಿಂದ ವಸತಿ ಸೌಕರ್ಯವಿಲ್ಲದೆ ದಯನೀಯ ಸ್ಥಿತಿಯಲ್ಲಿದ್ದ ಕುಂದಾಪುರ ಕಸಬಾ ಗುಡ್ಡೆ ನಿವಾಸಿಗಳಾದ ಮೈಮುನಾ ಹಾಗೂ ರಮಿಝ ಇವರಿಗೆ ಹಸ್ತಾಂತರಿಸಲಾಯಿತು.

ಮೌಲನಾ ಶಾಹಿದ್ ಹುಸೇನ್ ಅವರ ಕಿರಾತ್ ಪಠಣದಿಂದ ಆರಂಭಗೊಂಡ ಸಭಾ ಕಾರ್ಯಕ್ರಮಕ್ಕೆ ಉದ್ಯಮಿ ಶೇಕ್ ಫರೀದ್ ಭಾಷಾ ಹಾಗೂ ಹುಸೇನ್ ಮಾಸ್ಟರ್ ರಿಬ್ಬನ್ ಕಟ್ ಮಾಡುವುದರ ಮೂಲಕ ಚಾಲನೆ ನೀಡಿದರು.

Click Here

ಸಭಾಧ್ಯಕ್ಷತೆಯನ್ನು ವಹಿಸಿದ್ದ ಕುಂದಾಪುರ ಜಮಾತಿನ ಅಧ್ಯಕ್ಷ ರಾದ ಎಸ್. ಎಮ್. ವಸೀಮ್ ಅವರು ಅಲ್ಲಾಹುವಿನ ಕೃಪೆಯಿಂದಾಗಿ ಎರಡು ಕುಟುಂಬಗಳಿಗೆ ಸೂರನ್ನು ಒದಗಿಸಲಾದ ಧನ್ಯತಾ ಕಾರ್ಯದ ಬಗ್ಗೆ ಶ್ಲಾಘಿಸಿ ಇದು ಇತರರಿಗೂ ಪ್ರೇರಣೆ ಯಾಗಲಿ ಎಂದು ಹೇಳಿದರು.

ಅತಿಥಿ ಗಳಾಗಿ ಕೋಟ ಇಬ್ರಾಹಿಂ ಸಾಹೇಬ್, ಅಶ್ಮತ್ ಅಲಿ ಕತಾರ್ , ಪುರಸಭಾ ಸದಸ್ಯ ಅಬು ಮಹಮ್ಮದ್, ಕೆಜಿಸಿಯ ಸದಸ್ಯರಾದ ಮಹ್ಮದ್ ಆಯಾಜ್, ಅಮ್ಜದ್ ಖಾನ್ ಉಮ್ಮಿದ್ ಫೌಂಡೇಶನ್ ಅಧ್ಯಕ್ಷ ಮಹ್ಮದ್ ಇಕ್ಬಾಲ್ ಇದ್ದರು.

ಮನೆಗಳ ನಿರ್ಮಾಣ ಕಾರ್ಯದಲ್ಲಿ ಶ್ರಮಿಸಿದ ಫರ್ಹ ನಾಸೀರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಮಾತ್ ಕಾರ್ಯದರ್ಶಿ ಶಮ್ಸ್ ತಬ್ರೇಜ್, ಬಿ. ರಫೀಕ್, ಶಾಬಾನ್, ಶಾಬುದ್ದಿನ್, ನೌಶಾದ್,ಸಾದಿಕ್, ಹನೀಫ್, ಜೆ ಎಮ್. ಜಾಫರ್, ಸುಹೇಲ್ ಮುಂತಾದವರು ಉಪಸ್ಥಿತರಿದ್ದರು. ಫರ್ಹ ನಾಸೀರ್ ಸ್ವಾಗತಿಸಿ, ಧನ್ಯವಾದ ಅರ್ಪಿಸಿದರು. ಆದಿಲ್ ಭಾಷಾ ನಿರೂಪಿಸಿದರು.

LEAVE A REPLY

Please enter your comment!
Please enter your name here