ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸರಕಾರಿ ಪ್ರೌಢಶಾಲೆ ಕಾಳಾವರದ ಇಂಟ್ರ್ಯಾಕ್ಟ್ ಕ್ಲಬ್ ಏರ್ಪಡಿಸಿದ ಮಕ್ಕಳೊಂದಿಗೆ ಸಮಾಲೋಚನೆ ಕಾರ್ಯಕ್ರಮಕ್ಕೆ ಆಗಮಿಸಿದ ಅಂತರಾಷ್ಟ್ರೀಯ ಖ್ಯಾತಿಯ ವೖದ್ಯ ಅಸೋಡು ಡಾ. ಅನಂತರಾಮ್ ಶೆಟ್ಟಿಯವರು ಮಕ್ಕಳೊಂದಿಗೆ ಶೖಕ್ಷಣಿಕ ಸಂವಾದ ನಡೆಸಿದರು. ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಪುಟ್ಟ ಹಳ್ಳಿ ಅಸೋಡಿನಲ್ಲಿ ಪ್ರಾರಂಭವಾದ ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡರು. ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಒತ್ತಡ ನಿರ್ವಹಣೆಯ ಅರಿವಿಲ್ಲದೆ ಆತ್ಮಹತ್ಯೆ ಹೆಚ್ಚುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಸೋಲನ್ನೊಪ್ಪಿಕೊಳ್ಳವ ಮನೋಭಾವ ಬೆಳೆಸಿಕೊಳ್ಳಿ ಎಂದರು. ಸ್ವತಃ ತಮ್ಮ ಜೀವನದ ಸೋಲುಗಳ ಉದಾಹರಣೆಗಳ ಮೂಲಕ ಮನದಟ್ಟು ಮಾಡಿದರು. ಇಡೀ ಸಂಭಾಷಣೆಯನ್ನು ಕುಂದಾಪುರ ಕನ್ನಡದಲ್ಲಿ ನಡೆಸಿದ್ದು ವಿಶೇಷವಾಗಿತ್ತು.
ಸಭೆಯಲ್ಲಿ ಸರಿತಾ ಅನಂತರಾಮ್ ಶೆಟ್ಟಿ, ಪುತ್ರಿ ನೇಹಾ, ಉದ್ಯಮಿ ಶಿವಾನಂದ ಹೆಗ್ಡೆ ಉಪಸ್ಥಿತರಿದ್ದರು.
ಸಭೆಯ ಅದ್ಯಕ್ಷತೆಯನ್ನು ಪ್ರಭಾರ ಮುಖ್ಯೋಪಾಧ್ಯಾಯ ಗಣೇಶ ಶೆಟ್ಟಿಗಾರ್ ವಹಿಸಿದ್ದರು.
ಕ್ಲಬ್ ನ ಮಾರ್ಗದರ್ಶಿ ಶಿಕ್ಷಕ ದಿನೇಶ ಪ್ರಭು ಸ್ವಾಗತಿಸಿ, ಕಾರ್ಯಕ್ರಮ ಸಂಯೋಜನೆ ಮಾಡಿದರು. ಇಂಟ್ರ್ಯಾಕ್ಟ್ ಕ್ಲಬ್ ನ ಅಧ್ಯಕ್ಷ ಮನೋಜ್ ಅತಿಥಿಗಳ ಪರಿಚಯ ಮಾಡಿದರು. ಶಾಲಾ ವಿದ್ಯಾರ್ಥಿ ನಾಯಕಿ ಅನ್ವಿತಾ ಶೆಟ್ಟಿ ವಂದಿಸಿದರು.