ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಹಂಗಳೂರು ಲಯನ್ಸ್ ಕ್ಲಬ್, ಕೋಣಿ ಗ್ರಾಮ ಪಂಚಾಯತ್ ನೆರವಿನಿಂದ ಪಂಚಾಯತ್ ಸಭಾಂಗಣದಲ್ಲಿ ಶಿರೂರು ಮುದ್ದುಮನೆ ಪಾರ್ವತಿ ಮಹಾಬಲ ಶೆಟ್ಟಿ ಕಣ್ಣಿನ ಆಸ್ಪತ್ರೆ ವೈದ್ಯರ ಮೂಲಕ ಶಿಬಿರ ಏರ್ಪಡಿಸಿದ್ದು, ಸುಮಾರು 127 ಶಿಬಿರಾರ್ಥಿಗಳು ಭಾಗವಹಿಸಿದ್ದು 21 ಮಂದಿಗೆ ಶಸ್ತ್ರ ಚಿಕಿತ್ಸೆಗೆ ಮತ್ತು 71 ಮಂದಿಗೆ ಹೆಚ್ಚಿನ ತಪಾಸಣೆಗೆ ಆಯ್ಕೆ ಮಾಡಲಾಯಿತು.
ಕೋಣಿ ಗ್ರಾ.ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜರುಗಿದ ಶಿಬಿರವನ್ನು ಲಯನ್ ಅಧ್ಯಕ್ಷ ಲಯನ್ ರೋವನ್ ಡಿ’ಕೊಸ್ತಾ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ದ್ವಿತೀಯ ಉಪ ರಾಜ್ಯಪಾಲ ಲಯನ್ ರಾಜೀವ ಕೋಟ್ಯಾನ್, ಜೋನ್ ಚೇರ್ಮನ್ ಲಯನ್ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ನ ಪದಾಧಿಕಾರಿಗಳು ಮತ್ತು ಪಂಚಾಯತ್ ಸದಸ್ಯರು ಭಾಗವಹಿಸಿದ್ದರು.