ಮಣೂರು ಪಡುಕರೆ ಪ್ರೌಢಶಾಲೆ :ಹಾವು – ನಾವು ಕಾರ್ಯಕ್ರಮ

0
75

ಹಾವುಗಳು ಪ್ರಕೃತಿಯ ಒಡಲಿನ ಒಡನಾಡಿ – ಗುರುರಾಜ್ ಸನಿಲ್

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪರಿಸರ ಜೀವ ಸಮತೋಲನದಲ್ಲಿ ಪ್ರಕೃತಿಯೇ ಸೃಷ್ಟಿಸಿಕೊಂಡ ಅನೇಕ ಪ್ರಭೇಧದ ಜೀವಿಗಳು ನಮ್ಮ ಸುತ್ತಮುತ್ತಲಿನಲ್ಲಿ ಕಾಣಬಹುದು. ಹಾವುಗಳು ಪರಿಸರದ ಮಿತ್ರನಾಗಿ ಮಾನವನ ಬದುಕಿಗೂ ಜೊತೆಯಾಗುತ್ತವೆ. ಹಾವುಗಳಲ್ಲಿ ವಿಷರಹಿತ ವಿಷ ಸಹಿತ ಎಂಬ ವಿಭಾಗ ಮಾಡಬಹುದು. ಕಾಳಿಂಗ ಸರ್ಪ ಹಾವು ಮಾತ್ರ ಗೂಡು ಮಾಡಿ ಮರಿ ಹಾಕುವ ಹಾಗೂ ಉಳಿದ ಎಲ್ಲಾ ಹಾವುಗಳು ಮೊಟ್ಟೆ ಇಡುವಂತವು. ಮನುಷ್ಯನಿಗೆ ತೊಂದರೆ ಕೊಡದೆ ಬದುಕುವ ಜೀವಿಗಳಲ್ಲಿ ಹಾವುಗಳನ್ನು ಗುರುತಿಸಬಹುದು.

ಸಹಸ್ರಾರು ಹಾವುಗಳನ್ನು ಹಿಡಿದು ಸಂರಕ್ಷಣೆ ಮಾಡಿ ಅನೇಕ ಪ್ರಶಸ್ತಿಗಳನ್ನು ಪಡೆದ ಉರಗ ತಜ್ಞ ಗುರುರಾಜ್ ಸನಿಲ್ ರವರು ಕೋಟದ ಮಣೂರು ಪಡುಕರೆಯ ಪ್ರೌಢಶಾಲೆಯಲ್ಲಿ ಆಯೋಜಿಸಿದ ಹಾವು-ನಾವು ಕಾರ್ಯಕ್ರಮದಲ್ಲಿ ಭಾಗವಹಿಸಿ ಸನಿಹದ ಹಿರಿಯ ಪ್ರಾಥಮಿಕ ಶಾಲಾ, ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಉತ್ತಮವಾದ ಮಾಹಿತಿಯನ್ನು ಕಾರ್ಯಕ್ರಮ ಉದ್ಘಾಟಿಸಿ ಪವರ್ ಪಾಯಿಂಟ್ ಬಳಸಿ ಉಪನ್ಯಾಸ ನಿರ್ವಹಿಸಿಕೊಟ್ಟರು.

Click Here

ಗೀತಾನಂದ ಪೌಂಡೇಶನ್ ಮಣೂರು ಪಡುಕರೆ ಪ್ರಾಯೋಜಕತ್ವದಲ್ಲಿ ಹಾಗೂ ಸಮೃದ್ಧಿ ಇಕೋ ಕ್ಲಬ್ ಸಂಯೋಜನೆಯಲ್ಲಿ ನಡೆದ ಸಮಾರಂಭದಲ್ಲಿ ವಿವೇಕಾನಂದ ವಿ ಗಾಂವಕಾರ ಮುಖ್ಯೋಪಾಧ್ಯಾಯರು ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಕಣ್ಮರೆಯಾಗುತ್ತಿರುವ ಕೆಲವು ಪ್ರಕಾರದ ಹಾವುಗಳನ್ನು ಸಂರಕ್ಷಿಸಬೇಕಿದೆ ಇದೇ ರೀತಿ ಹಾವುಗಳ ಸಂತತಿ ನಾಶವಾದರೆ ಪರಿಸರದಲ್ಲಿ ಅಸಮತೋಲನವಾಗಿ ಇನ್ನೊಂದು ಉಪದ್ರಕಾರಿ ಜೀವಿಗಳು ಹೆಚ್ಚಾಗಬಹುದು ಹಾಗಾಗಿ ಹಾವುಗಳ ಸಂರಕ್ಷಣೆ ನಮ್ಮ ನಿಮ್ಮಲ್ಲರ ಜವಬ್ದಾರಿಯಾಗಬೇಕು ಎಂದರು. ಸಮಾರಂಭದಲ್ಲಿ ಗೀತಾನಂದ ಫೌಂಡೇಶನ್ ನಿರ್ವಹಕರಾದ ರವಿಕಿರಣ್ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಘವೇಂದ್ರ ಕಾಂಚನ್, ಸವಿತಾ ಕಾರ್ಕಡ ಕ್ಲಸ್ಟರ್ ಸಿ.ಆರ್.ಪಿ, ಸಂಮೃದ್ಧಿ ಇಕೋ ಕ್ಲಬ್ ಅಧ್ಯಕ್ಷ ಶ್ರವಣ್ ಉಪಸ್ಥಿತರಿದ್ದರು.

ಇಕೋ ಕ್ಲಬ್ ಮಾರ್ಗದರ್ಶಕ ಶಿಕ್ಷಕಿ ಅನುಪಮ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು . ಇದೇ ಸಂದರ್ಭದಲ್ಲಿ ಡಾ ಶಿವರಾಮ ಕಾರಂತ ಬಾಲ ಪ್ರತಿಭೆ ಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಇಕೋ ಕ್ಲಬ್ ವತಿಯಿಂದ ನಡೆದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಂಜುನಾಥ ಹೊಳ್ಳ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರು ವಂದಿಸಿದರು. ನೆರೆಯ ಶಾಲೆಯಿಂದ ಬಂದ ಶಿಕ್ಷಕರನ್ನು ಅಭಿನಂದಿಸಲಾಯಿತು ವಿದ್ಯಾರ್ಥಿನಿ ಕುಮಾರಿ ಸಮೃದ್ಧಿ ನಿರೂಪಿಸಿ ಶಿಕ್ಷಕಿ ಹರ್ಷಿತಾ ಕಾರ್ಯಕ್ರಮ ಸಂಘಟಿಸಿದರು.

Click Here

LEAVE A REPLY

Please enter your comment!
Please enter your name here