ವಕ್ವಾಡಿ :ಗುರುಕುಲ ಶಾಲೆಯ ಪುಷ್ಪವಾಟಿಕಾದ ಪುಟಾಣಿಗಳಿಗಾಗಿ ಹಣ್ಣುಗಳ ದಿನಾಚರಣೆ

0
17

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಗುರುಕುಲ ಪಬ್ಲಿಕ್ ಶಾಲೆಯ ಪೂರ್ವಪ್ರಾಥಮಿಕ ಪುಟಾಣಿಗಳು ತಮ್ಮ ಪುಷ್ಪವಾಟಿಕಾದಲ್ಲಿ ಹಣ್ಣುಗಳ ದಿನವನ್ನು ಅತ್ಯಂತ ವಿಭಿನ್ನವಾಗಿ ಆಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಜಂಟಿ ಕಾರ್ಯನಿರ್ವಾಹಕರಾದ ಅನುಪಮ. ಎಸ್. ಶೆಟ್ಟಿ ಮಾತನಾಡಿ ಆರೋಗ್ಯದ ದೃಷ್ಟಿಯಿಂದ ಆಯಾಯ ಕಾಲಕ್ಕೆ ಸಿಗುವ ಹಣ್ಣುಗಳನ್ನು ಸಮಯೋಚಿತವಾಗಿ ಬಳಸುವ ಪ್ರವೃತ್ತಿಯನ್ನು ನಾವು ನಮ್ಮ ಹಿರಿಯರಿಂದ ಕಲಿತಿದ್ದೇವೆ. ಪುಟಾಣಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಹಣ್ಣುಗಳ ಮಹತ್ವವನ್ನು ಈ ರೀತಿಯಾಗಿ ಪ್ರಾತ್ಯಕ್ಷಿಕೆಯ ಮೂಲಕ ಮಕ್ಕಳಿಗೆ ತಿಳಿಸುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

Click Here

ಹಣ್ಣುಗಳ ಮಹತ್ವವನ್ನು ವಿದ್ಯಾರ್ಥಿಗಳು ನೃತ್ಯ , ಪಾತ್ರಾಭಿನಯವನ್ನು ಮಾಡುವ ಮೂಲಕ ಎಲ್ಲರಿಗೂ ಅರ್ಥಪೂರ್ಣವಾಗಿ ಮನವರಿಕೆ ಮಾಡಿಸಿದರು. ಒಟ್ಟಿನಲ್ಲಿ ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳ ಮೂಲಕ ಹಣ್ಣುಗಳ ಮಹತ್ವವನ್ನು ಅರ್ಥಪೂರ್ಣವಾಗಿ ಅರಿತರು.

ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಸುನಿಲ್. ಪ್ಯಾಟ್ರಿಕ್ ಸಂಯೋಜಕಿ ವಿಶಾಲ ಶೆಟ್ಟಿ , ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹಶಿಕ್ಷಕಿ ರೇಣುಕಾ ನಿರೂಪಿಸಿ, ವಂದಿಸಿದರು.

Click Here

LEAVE A REPLY

Please enter your comment!
Please enter your name here