ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆ

0
22

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಿಸಲಾಯಿತು. ಲಯನ್ ರೋವನ್ ಡಿ’ ಕೋಸ್ತ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಪಿ. ಡಿ. ಜಿ. ಲಯನ್ ನೆರಿ ಕರ್ನೆಲಿಯೋ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಭೆಯಲ್ಲಿ ಆಕರ್ಷಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸೇವಾಕಾರ್ಯಕ್ರಮದ ಅಂಗವಾಗಿ ಅನನ್ಯ, ಎಡ್ವಿನ್ ಕರ್ಕಡ ಮತ್ತು ಶ್ರೀಲತಾ ಇವರಿಗೆ ಚಿಕಿತ್ಸೆಗಾಗಿ ಧನಸಹಾಯ ಮಾಡಲಾಯಿತು.

Click Here

ಕರಾಟೆಯಲ್ಲಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ನವಮಿ ಶೆಟ್ಟಿಯನ್ನು ಸನ್ಮಾನಿಸಲಾಯಿತು.

ಝೋನ್ ಚೇರ್ಮನ್ ಲಯನ್ ಬಾಲಕೃಷ್ಣ ಶೆಟ್ಟಿ ಏಸು ಪ್ರಭುವಿನ ಭೋದನೆಯ ಮಹತ್ವವನ್ನು ಸಭೆಗೆ ತಿಳಿಸಿದರು.

ಲಯನ್ ಮ್ಯಾಥ್ಯೂ ಜೋಸೆಫ್ ವರದಿ ವಾಚಿಸಿದರೆ, ಲಯನ್ ಪುನೀತ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಲಯನ್ ಎಲ್. ಜೆ. ಫೆರ್ನಾಂಡಿಸ್ ಮತ್ತು ಲಯನ್ ಗ್ರೇಟ್ಟಾ ಡಿ’ಕೋಸ್ತ್ ಕಾರ್ಯಕ್ರಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here