ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಗ್ರಾಮ ಪಂಚಾಯತ್‌ಗಳು ಸ್ವಾಯತ್ತ ಘಟಕಗಳಾಗಿ, ಸ್ವತಂತ್ರ ಸರ್ಕಾರವಾಗಿ ಕಾರ್ಯನಿರ್ವಹಿಸಬೇಕು, ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಪಂಚಾಯತ್‌ಗಳ ಬಲವರ್ದನೆಗೆ ಪೂರಕ ಅವಶ್ಯತೆಗಳನ್ನು ಸೃಷ್ಟಿಸಿಕೊಂಡುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿದೆ. ಒಕ್ಕೂಟ ವ್ಯವಸ್ಥೆಯ ಮಾದರಿಯಲ್ಲಿ ನಡೆಯುತ್ತಿರುವ ಕಾರ್ಯಗಳು ಕೂಡಾ ಮಹತ್ವದ್ದಾಗಿದೆ. ಪ್ರಸ್ತುತ ವಂಡ್ಸೆ ಗ್ರಾಮ ಪಂಚಾಯತ್ ಮಾಡಿದ ಸಾಧನೆ ಗಮನಾರ್ಹವಾದುದು ಎಂದು ೫ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಡಾ.ಸಿ ನಾರಾಯಣ ಸ್ವಾಮಿ ಹೇಳಿದರು.
ಅವರು ಕುಂದಾಪುರ ತಾಲೂಕು ವಂಡ್ಸೆ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ, ಪಂಚಾಯಿತಿ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಆಡಳಿತ ಸಂಸ್ಥೆಗಳಿಗೆ ಕಾಲಕಾಲಕ್ಕೆ ಸರಿಯಾಗಿ ಚುನಾವಣೆ ನಡೆದಾದ ಅನುದಾನಗಳು ಸರಿಯಾಗಿ ಬರುತ್ತದೆ. ಕರ್ನಾಟಕದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ನಡೆಯದೇ ಇರುವುದರಿಂದ ಅನುದಾನವನ್ನು ತಡೆಹಿಡಿಯಲಾಗಿದೆ. ೨೦೨೫-೨೬ನೇ ಸಾಲಿನಲ್ಲಿ ಚುನಾವಣೆ ನಡೆದರೆ ಅನುದಾನ ಬರುತ್ತದೆ. ಇಲ್ಲದಿದ್ದರೆ ಅನುದಾನ ಲ್ಯಾಪ್ಸ್ ಆಗುತ್ತದೆ ಎಂದರು.
೫ನೇ ಹಣಕಾಸು ಆಯೋಗ ರಾಜ್ಯದಲ್ಲಿ ಸಂಚರಿಸಿ ಮಾಹಿತಿಗಳನ್ನು ಸಂಗ್ರಹಿಸಿ, ಸಂಬಂಧಪಟ್ಟಂತೆ ಸಮಿತಿ ಚರ್ಚೆ ನಡೆಸಿ, ಸರಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ. ಸಂಪನ್ಮೂಲ, ಅನುದಾನ, ಆಡಳಿತ ಸಂಸ್ಥೆಗಳ ಬಲವರ್ದನೆಗೆ ಪೂರಕವಾಗಿ ಆಯೋಗ ಕೆಲಸ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ೫ನೇ ಹಣಕಾಸು ಆಯೋಗದ ಸದಸ್ಯರಾದ ಮೊಹಮ್ಮದ್ ಸನಾವುಲ್ಲಾ, ಆರ್.ಎಸ್ ಪೊಂಡೆ, ೫ನೇ ರಾಜ್ಯ ಹಣಕಾಸು ಆಯೋಗದ ಸಮಾಲೋಚಕರಾದ ಎಂ.ಕೆ ಕೆಂಪೆಗೌಡ, ಸಿ.ಜಿ ಸುಪ್ರಸನ್ನ, ೫ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಕೆ.ಯಾಲಕ್ಕಿ ಗೌಡ, ಹಾಗೂ ವಾಹಬ್, ಸಿ.ಪಿ.ಓ ಉದಯ ಶೆಟ್ಟಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ ಆಗಮಿಸಿದ್ದರು.
ಪಂಚಾಯತ್ ರಾಜ್ ತಜ್ಞರಾದ ಎಸ್.ಜನಾರ್ದನ್ ಮರವಂತೆ ಪಂಚಾಯತ್‌ಗಳು ಎದುರಿಸುತ್ತಿರುವ ಸಮಸ್ಯೆ, ಬಲವರ್ದನೆ, ಹಣಕಾಸು ಆಯೋಗದ ಪಾತ್ರದ ಬಗ್ಗೆ ಸಮಿತಿಯ ಗಮನ ಸಳೆದು ಮಾತನಾಡಿದರು.
ಈ ಸಂದರ್ಭದಲ್ಲಿ ತಾ.ಪಂ. ವ್ಯವಸ್ಥಾಪಕರಾದ ರಾಮಚಂದ್ರ ಮಯ್ಯ, ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಅವಿನಾಶ್, ಉಪಾಧ್ಯಕ್ಷ ಗೋವರ್ದನ್ ಜೋಗಿ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವೀಂದ್ರ ಶೆಟ್ಟಿ, ಇಡೂರು ಕುಂಜ್ಞಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಆಚಾರ್ಯ, ಕೆರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದರ್ಶನ ಶೆಟ್ಟಿ, ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ ದೇವಾಡಿಗ, ಹಕ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ, ನಮ್ಮ ಭೂಮಿ ಸಂಸ್ಥೆ ಶ್ರೀನಿವಾಸ ಗಾಣಿಗ, ವಂಡ್ಸೆ ಗ್ರಾಮ ಪಂಚಾಯತ್ ಸದಸ್ಯರಾದ ಶಶಿಕಲಾ ಎಸ್., ಪ್ರಶಾಂತ್ ಪೂಜಾರಿ, ಸುಬ್ಬು, ಸುಶೀಲಾ, ಸಿಬ್ಬಂದಿಗಳು, ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವೀಂದ್ರ ಶೆಟ್ಟಿ ಹುದ್ದೆಗಳು ಖಾಲಿ ಇರುವುದರಿಂದ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ. ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗಮನ ಸಳೆಯುವ ಕೆಲಸವಾಗಬೇಕು ಎಂದರು.
ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ ದೇವಾಡಿಗ ಮಾತನಾಡಿ ಇ-ಸ್ವತ್ತುಗಳಲ್ಲಿನ ಲೋಪದೋಷ, ಗ್ರಾಮ ಪಂಚಾಯತ್ ಗಳಿಗೆ ಆಗುತ್ತಿರುವ ಸಮಸ್ಯೆಗಳ ಗಮನ ಸಳೆದರು.
ವಂಡ್ಸೆ ಗ್ರಾಮ ಪಂಚಾಯಿತಿ ನಿಕಟಪೂರ್ವಾಧ್ಯಕ್ಷ, ಹಾಲಿ ಸದಸ್ಯರಾದ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ವಂಡ್ಸೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಶೇಟ್ ಪಿಪಿಟಿ ಮೂಲಕ ಗ್ರಾಮ ಪಂಚಾಯತ್ ಸಾಧನೆಯ ಅಂಕಿ ಅಂಶಗಳನ್ನು ವಿವರಿಸಿದರು. ಉದಯ ಕುಮಾರ್ ಶೆಟ್ಟಿ ಎಸ್.ಎಲ್,.ಆರ್ ಎಂ ಆರಂಭ, ಪ್ರಗತಿ, ಪ್ರಸ್ತುತ ಮಲ್ಟಿ ವಿಲೇಜ್ ಎಸ್.ಎಲ್.ಆರ್.ಎಂ ಘಟಕದ ಬೆಳೆವಣಿಗೆ, ಮಾಸಿಕ ಲಾಭ, ಮುಂದಿನ ಯೋಜನೆಗಳ ವಿವರಿಸಿದರು. ಇದರೊಂದಿಗೆ ಸೈನಿಕ ಹುಳುಗಳ ಮೂಲಕ ಎರೆಹುಳು ಗೊಬ್ಬರದ ದುಪ್ಪಟ್ಟು ಪೋಷಕಾಂಶಯುಕ್ತ ಗೊಬ್ಬರ ತಯಾರಿಯ ಹೊಸ ಯೋಜನೆ, ಶೀಘ್ರ ಆರಂಭವಾಗಲಿರುವ ಉಪಶಾಮಕ ಆರೈಕೆ ಯೋಜನೆಯ ಬಗ್ಗೆ ವಿವರಣೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋವರ್ಧನ್ ಜೋಗಿ ವಂದಿಸಿದರು.