ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ವರ್ಷಾವಧಿ ಹಾಲುಹಬ್ಬ ಗೆಂಡಸೇವೆ, ಢಕ್ಕೆಬಲಿ ಹಾಗೂ ತುಲಾಭಾರ ಸೇವೆ ವಿಜೃಂಭಣೆಯಿಂದ ಜ.9ರಿಂದ ಜ.11 ಶನಿವಾರದ ತನಕ ನಡೆಯಿತು.
ಜ.9ರಂದು ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ಅಮೃತೇಶ್ವರಿ ಹಲವು ಮಕ್ಕಳ ತಾಯಿಗೆ ಪಂಚವಿಂಶತಿ ದ್ರವ್ಯಕಲಶ ಪೂರ್ವಕ ಕಲಾತತ್ವ ಹೋಮ ಹಾಗೂ ಪರಿವಾರ ದೇವರುಗಳಿಗೆ ನವಕ ಪ್ರಧಾನ ಕಲಾಧಿವಾಸ ಹೋಮ ನಡೆಯಿತು. ಜ.10ರಂದು ಸಂಜೆ ನಾಗದೇವರಿಗೆ ಹಾಲಿಟ್ಟು ಸೇವೆ, ಕೆಂಡಸೇವೆ, ಅಮ್ಮನವರ ಹಾಗೂ ಬೊಬ್ಬರ್ಯ ದೇವರ ಹಾಲಿಟ್ಟು ಸೇವೆ, ಅನ್ನಸಂತರ್ಪಣೆ ನಡೆಯಲಿದೆ. ಜ.11 ಶನಿವಾರ ಬೆಳಿಗ್ಗೆ ಡಕ್ಕೆಬಲಿ, ದರ್ಶನ ಸೇವೆ, ತುಲಾಭಾರ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಅಮೃತೇಶ್ವರಿ ಹಲವು ಮಕ್ಕಳ ತಾಯಿಗೆ ತುಲಾಭಾರ ಪ್ರಿತ್ಯಾರ್ಥ ಸೇವೆ. ಬೇರೆ ಬೇರೆ ಸಂದರ್ಭಗಳಲ್ಲಿ ಸಂಕಷ್ಟ ಕಾಲದಲ್ಲಿ ತುಲಾಭಾರ ಹರಕೆ ಹೇಳಿಕೊಳ್ಳುತ್ತಾರೆ. ಸಮಸ್ಯೆ ಪರಿಹಾರವಾದಾಗ ಹರಕೆ ತೀರಿಸುವುದನ್ನು ಕಾಣಬಹುದು. ಹಬ್ಬದ ಸಂದರ್ಭದಲ್ಲಿ 250ಕ್ಕೂ ಹೆಚ್ಚು ತುಲಾಭಾರ ಸೇವೆಗಳು ನಡೆಯುತ್ತವೆ. ಈ ಭಾಗದ ಶಕ್ತಿ ಕ್ಷೇತ್ರಗಳಲ್ಲಿ ಜಾತ್ರೆಯ ಸಂದರ್ಭ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ತುಲಾಭಾರ ನೆಡೆಯುತ್ತದೆ.
ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಕೋಟ ಗಾಂಧಿ ಮೈದಾನ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಮಂದಿ ಅನ್ನಸಂತರ್ಪಣೆಯಲ್ಲಿ ಅನ್ನ ಪ್ರಸಾದ ಸ್ವೀಕರಿಸಿದರು.
ಪ್ಲಾಸ್ಟಿಕ್ ಮುಕ್ತ ಜಾತ್ರೆ:
ಗೀತಾನಂದ ಫೌಂಡೇಶನ್ ವತಿಯಿಂದ ಆಗಮಿಸುವ ಭಕ್ತಾದಿಗಳಿಗೆ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಣ್ಣುಕಾಯಿಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತಂದ ಭಕ್ತಾಧಿಗಳಿಗೆ ಬಟ್ಟೆಯ ಚೀಲ ನೀಡಿ ನಿರಂತರ ಬಟ್ಟೆಯ ಚೀಲಗಳನ್ನೇ ಬಳಸುವಂತೆ ಪ್ರೇರಪಿಸಲಾಗುತ್ತಿತ್ತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಆನಂದ್ ಸಿ.ಕುಂದರ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಸುಬ್ರಾಯ ಜೋಗಿ (ಪ್ರಧಾನ ಅರ್ಚಕರು), ಗಣೇಶ ಕೆ.ನೆಲ್ಲಿಬೆಟ್ಟು, ಜ್ಯೋತಿ ದೇವದಾಸ ಕಾಂಚನ್, ಸುಧಾ ಎ.ಪೂಜಾರಿ, ರತನ್ ಐತಾಳ್, ಸುಭಾಸ್ ಶೆಟ್ಟಿ, ಶಿವ ಪೂಜಾರಿ, ಕೆ.ಚಂದ್ರಶೇಖರ ಆಚಾರ್ ಉಪಸ್ಥಿತರಿದ್ದರು.