ಕುಂದಾಪುರ :ಸಮರ್ಥ ಜೆ ರಾವ್ ಅವರಿಗೆ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ಪ್ರವೀಣ್ ಮಹಾದೇವ್ ತಿಪ್ಸೆ ಪ್ರಶಸ್ತಿ ಪ್ರದಾನ

0
92

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ಕಶ್ವಿ ಚೆಸ್ ಸ್ಕೂಲ್ ವತಿಯಿಂದ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ಪ್ರವೀಣ್ ಮಹಾದೇವ್ ತಿಪ್ಸೆ ಅವರ ಹೆಸರಿನಲ್ಲಿ ಕೊಡ ಮಾಡುವ ಪ್ರಶಸ್ತಿ ವಿತರಣಾ ಸಮಾರಂಭ ಕೋಟೇಶ್ವರದ ಯುವ ಮೆರಿಡಿಯನ್ ಕನ್ವೆನ್ಷನ್ ಸೆಂಟರ್ ಅಲ್ಲಿ ನಡೆಯಿತು.

ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಪಡೆದು ದೇಶಕ್ಕೆ ಹೆಮ್ಮೆ ತಂದ ಸಮರ್ಥ ಜೆ ರಾವ್ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಭಾರತದಲ್ಲೇ ಚೆಸ್ ಆಟಗಾರರ ಹೆಸರಿನಲ್ಲಿ ನೀಡುತ್ತಿರುವ ಮೊದಲ ಪ್ರಶಸ್ತಿ ಇದಾಗಿದ್ದು ಸ್ವತಃ ಪ್ರವೀಣ್ ಮಹದೇವ್ ತಿಪ್ಸೆ ಅವರೇ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು.

Click Here

ಮುಖ್ಯ ಅತಿಥಿಗಳಾಗಿ ಯುವ ಮರೆಡಿಯನ್ ಆಡಳಿತ ಪಾಲುದಾರರಾದ ಬಿ ಉದಯ್ ಕುಮಾರ್ ಶೆಟ್ಟಿ, ವಿನಯ್ ಕುಮಾರ್ ಶೆಟ್ಟಿ,ಮುಂಬೈ ಉದ್ಯಮಿ ಆದರ್ಶ ಶೆಟ್ಟಿ,ಯಾಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉದ್ಯಮಿಗಳು ಆದ ಎಚ್ ಪ್ರಕಾಶ್ ಶೆಟ್ಟಿ, ಕುಂದಾಪುರ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ್ ರಾಯಪ್ಪನ ಮಠ,ಕಾರ್ಮಿಕ ಸಂಘ ಬೆಂಗಳೂರು ಇದರ ಮಾಜಿ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಹಾಗೂ ಅಂತರಾಷ್ಟ್ರೀಯ ಆರ್ಬಿಟರ್ ಬೆಂಗಳೂರಿನ ಸಲೀಮ್ ಬೇಗ್ ಆಗಮಿಸಿದ್ದರು

ಈ ಸಂದರ್ಭದಲ್ಲಿ ಚೆಸ್ ಅಲ್ಲಿ ಹಲವಾರು ಪ್ರಶಸ್ತಿ ಪಡೆದ ನಂದಕುಮಾರ್ ಸೂಲಿಕೆರೆ, ಅಣ್ಣಪ್ಪ ದೇವಾಡಿಗ, ಪಾವನಿ ಆರ್ ತೀರ್ಥಹಳ್ಳಿ, ಪ್ರಕೃತಿ ಪಿ ಶೆಟ್ಟಿ, ಪ್ರದೀಪ್ ಪಾಟೀಲ್, ಆರಾಧ್ಯ ಎಸ್ ಶೆಟ್ಟಿ, ಮಹತಿ ರಾವ್ ಇವರನ್ನು ಸನ್ಮಾನಿಸಲಾಯಿತು.

ಪ್ರಥಮ ಬಾರಿಗೆ ಹೊನಲು ಬೆಳಕಿನ ಚೆಸ್ ಪಂದ್ಯಾಟವನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದು ರಾಜ್ಯ ಹಾಗೂ ಹೊರ ರಾಜ್ಯದಿಂದ ಸುಮಾರು 500 ಸ್ಪರ್ಧಾರ್ಥಿಗಳು ಆಗಮಿಸಿದ್ದರು.

ಕಶ್ವಿ ಚೆಸ್ ಸಂಸ್ಥೆಯ ಸಂಸ್ಥಾಪಕ ನರೇಶ್ ರಾವ್ ಪ್ರಾಸ್ತಾವಿಕ ಮಾತನಾಡಿ, ಮಂಜುನಾಥ್ ಕುಣಿಗಲ್ ಕಾರ್ಯಕ್ರಮ ನಿರೂಪಿಸಿದರು

Click Here

LEAVE A REPLY

Please enter your comment!
Please enter your name here