ಕೋಟ :ಪಾರಂಪಳ್ಳಿ ಪಡುಕರೆ ಶನೀಶ್ವರ ದೇವಸ್ಥಾನ ಇದರ ನೂತನ ಶಿಲಾಮಯ ದೇಗುಲಕ್ಕೆ ಶಿಲಾನ್ಯಾಸ

0
165

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಾಲಿಗ್ರಾಮ ಪಾರಂಪಳ್ಳಿ ಪಡುಕರೆ ಶನೀಶ್ವರ ದೇವಸ್ಥಾನ ಇದರ ನೂತನ ಶಿಲಾಮಯ ದೇವಸ್ಥಾನದ ಕೆಸರುಕಲ್ಲು ಮುಹೂರ್ತ ಭೂಮಿ ಪೂಜೆ ಸೋಮವಾರ ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ನೆರವೆರಿತು.

Click Here

ಶಿಲಾನ್ಯಾಸ ಕಾರ್ಯವನ್ನು ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ನೆರವೆರಿಸಿದರು.

ಧಾರ್ಮಿಕ ವಿಧಿ ವಿಧಾನಗಳನ್ನು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಪ್ರಧಾನ ಅರ್ಚಕರಾದ ಜನಾರ್ದನ ಅಡಿಗ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ದೇವಸ್ಥಾನ ಜಿರ್ಣೊದ್ಧಾರ ಸಮಿತಿ ಗೌರವ ಅಧ್ಯಕ್ಷ ಉದ್ಯಮಿ ಆನಂದ ಸಿ.ಕುಂದರ್, ದೇವಸ್ಥಾನ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಮೆಂಡನ್, ಸಾಸ್ತಾನ ಬ್ರಹ್ಮ ಬೈದರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಎಮ್.ಸಿ ಚಂದ್ರ ಪೂಜಾರಿ, ಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಕೋಟತಟ್ಟು ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ, ಸ್ಥಳಿಯರಾದ ರತ್ನಾಕರ್ ಪೂಜಾರಿ, ಅಣ್ಣಪ್ಪ ಪೂಜಾರಿ,ದಿನೆಶ್ ಮೊಗವೀರ, ಸುರೆಶ್ ಪೂಜಾರಿ, ಶೀನ ಮರಕಾಲ, ಗಿರಿಶ್ ಪೂಜಾರಿ, ಸಿದ್ದಿ ಶ್ರೀನಿವಾಸ ಪೂಜಾರಿ, ನರಸಿಂಹ ಪೂಜಾರಿ, ದೇವಸ್ಥಾನದ ಶಿಲ್ಪಿ, ಅಶೋಕ ಕುಂದರ್,ಜಬ್ಬ ಮೆಂಡನ್,ಕೃಷ್ಣ ಶ್ರೀಯಾನ್ , ರಾಮ ಬಂಗೆರ, ರಾಜು ಮರಕಾಲ, ದರ್ಶನ್ ಬಂಗೆರ, ರಾಜು ಪೂಜಾರಿ, ದೇವ ಮರಕಾಲ, ಅಶೋಕ ಭಕ್ತಾದಿಗಳು ಹಾಗು ಊರ ಸಮಸ್ತರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here